Mysore
17
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

Kollegaala | ಗುಂಡಾಲ್‌ ಜಲಾಶಯದಲ್ಲಿ ಈಜಾಡಲು ಹೋಗಿದ್ದ ಯುವಕ ಸಾವು

man died swimming

ಕೊಳ್ಳೇಗಾಲ: ಇಲ್ಲಿನ ಗುಂಡಾಲ್ ಜಲಾಶಯದಲ್ಲಿ ಸ್ನೇಹಿತರಿಬ್ಬರ ಜೊತೆ ಈಜಾಡಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಶುಕ್ರವಾರ ನಡೆದಿದೆ.

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಗುಂಡಾಪುರ ಗ್ರಾಮದ ಶಿವಮಲ್ಲು ಎಂಬವರ ಮಗ ಮಲ್ಲೇಶ್(18) ಮೃತಪಟ್ಟ ಯುವಕ.

ಇದನ್ನೂ ಓದಿ:- ಮೈಸೂರು। ಚಾಮುಂಡಿ ಬೆಟ್ಟದಲ್ಲಿ ಕಾರು ಪಲ್ಟಿ: ಪ್ರಾಣಾಪಾಯದಿಂದ ಪಾರಾದ ಕುಟುಂಬಸ್ಥರು

ಈ ವಿಚಾರವನ್ನು ಸ್ನೇಹಿತರು ಗ್ರಾಮಕ್ಕೆ ಹೋಗಿ ಮೃತನ ಮನೆಯವರಿಗೆ ತಿಳಿಸಿದ್ದು, ಮೃತನ ತಂದೆ ಶಿವಮಲ್ಲು ನೀಡಿದ ದೂರಿನ ಮೇರೆಗೆ ಎಎಸ್‌ಐ ಮಂಜುನಾಥ್ ಪ್ರಕರಣ ದಾಖಲಿಸಿಕೊಂಡು, ಪರಿಣತ ಈಜುದಾರರಿಂದ ಮೃತದೇಹವನ್ನು ಹೊರತೆಗೆಸಿ, ಸರ್ಕಾರಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

Tags:
error: Content is protected !!