ಮಹದೇಶ್ವರ ಬೆಟ್ಟ : ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಬ್ಬರು ಸಚಿವರು ಮಾದಪ್ಪನ ದರ್ಶನವನ್ನು ಪಡೆದು ಪೂಜೆ ಸಲ್ಲಿಸಿದರು.
ಸಚಿವರಾದ ಡಾ. ಎಚ್. ಸಿ. ಮಹಾದೇವಪ್ಪ, ಕೆ. ವೆಂಕಟೇಶ್ ಭಾನುವಾರದಂದು ಮಾದಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಕ್ಯಾಬಿನೆಟ್ ಮೀಟಿಂಗ್ ಹಿನ್ನೆಲೆ ಇಂದು ಇಬ್ಬರು ಸಚಿವರು ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಲಿದ್ದು ಸಭೆಗೂ ಮುನ್ನ ಮಾದಪ್ಪನ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಡಿಸಿ ಶಿಲ್ಪಾನಾಗ್, ಎಸ್ಪಿ ಡಾ. ಬಿ. ಟಿ. ಕವಿತಾ ಪ್ರಾಧಿಕಾರದ ಕಾರ್ಯದರ್ಶಿ ರಘು ಈ ವೇಳೆ ಇದ್ದರು.





