ಹನೂರು: ಕೊಳ್ಳೇಗಾಲದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸಿನ ಟಯರ್ ಏಕಾಏಕಿ ಕಳಚಿ ಬಿದ್ದ ಘಟನೆ ತಾಳಬೆಟ್ಟದ ೫ನೇ ಕ್ರಾಸ್‌ನಲ್ಲಿ ಮಂಗಳವಾರ ಜರುಗಿದೆ.
ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಮೈಸೂರು ಕೊಳ್ಳೇಗಾಲ, ಹನೂರು ಮಾರ್ಗವಾಗಿ ಖಾಸಗಿ ಬಸ್ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾಗ ತಾಳಬೆಟ್ಟದ ಐದನೇ ತಿರುವಿನಲ್ಲಿ ಏಕಾಏಕಿ ಖಾಸಗಿ ಬಸ್ಸಿನ ಮುಂಭಾಗದ ಟಯರ್ ಕಳಚಿದೆ. ಪರಿಣಾಮ ಬಸ್ ರಸ್ತೆಗೆ ವಾಲಿದೆ.
ಈ ಬಸ್‌ನಲ್ಲಿ ೪೦ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಸ್ವಲ್ಪದರಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ನಂತರ ಖಾಸಗಿ ಬಸ್ ಚಾಲಕ ಹಾಗೂ ತಾಂತ್ರಿಕ ಸಿಬ್ಬಂದಿ ಬಸ್ ದುರಸ್ತಿಪಡಿಸಿಕೊಂಡು ಮಲೆ ಮಹದೇಶ್ವರ ಬೆಟ್ಟದತ್ತ ಪ್ರಯಾಣ ಬೆಳೆಸಿದ್ದಾರೆ.





