ಚಾಮರಾಜನಗರ: ಅಪ್ರಾಪ್ತೆ ಯುವತಿ ಪ್ರೀತಿ ನಿರಾಕರಿಸಿದ ಹಿನ್ನಲೆ ಬೇಸತ್ತ ಯುವಕನೋರ್ವ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲೇ ತಾನೇ ಚಾಕು ಇರಿದುಕೊಂಡು ಗಂಭೀರ ಗಾಯಗೊಂಡು ನಗರದ ಸಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ಸಾಣೆಗಲ್ಲಿನ ಪ್ರದೀಪ್ ಚಾಕುವಿನಿಂದ ಇರಿದುಕೊಂಡಿರುವ ವ್ಯಕ್ತಿ.
ಶನಿವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಹತ್ತಿದ್ದ ಯುವಕ, ಅಪ್ತಾಪ್ತೆಯ ಬಳಿ ಪ್ರೀತಿ ಒಪ್ಪಿಕೊಳ್ಳುವಂತೆ ಪೀಡಿಸಿದ್ದಾರೆ. ಆಕೆ ಪ್ರೀತಿ ನಿರಾಕರಿಸಿದ ಕಾರಣ ಚಾಕುವಿನಿಂದ ತಾನೇ ಇರಿದುಕೊಂಡು ಬಳಿಕ ಚಾಕುವನ್ನು ಬಾಲಕಿಯ ಕೈಗಿಟ್ಟು ಕೊಲೆ ಮಾಡಲು ಆಕೆಯೇ ಯತ್ನಿಸಿರುವ ರೀತಿಯಲ್ಲಿ ಬಿಂಬಿಸುವ ನಾಟಕವಾಡಿದ್ದಾನೆ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.





