ಹನೂರು: ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ ಪಾಳ್ಯ ವಲಯ ವ್ಯಾಪ್ತಿಯಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೇಲೆ ಒಂಟಿ ಸಲಗವೂಂದು ಏಕಾಏಕಿ ರೊಚ್ಚಿಗೆದ್ದು ಅಟ್ಟಾಡಿಸಿಕೊಂಡು ಬಂದಿದೆ ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ, ನಂತರ ಸುರಕ್ಷಿತವಾಗಿ ವಾಪಸ್ ತೆರಳಿದ್ದಾರೆ.
ಇದನ್ನೂ ಓದಿ:- ಚಾಮರಾಜನಗರ| ಕಾಡಾನೆ ದಾಳಿಗೆ ರೈತ ಬಲಿ
ಮಲೆ ಮಹದೇಶ್ವರ ವನ್ಯಜೀವಿಧಾಮದ ವ್ಯಾಪ್ತಿಯ ಪಿ.ಜಿ ಪಾಳ್ಯ ಸಫಾರಿಗೆ ಬುಧವಾರ ಬೆಳಗ್ಗೆ ಪ್ರವಾಸಿಗರು ಸಫಾರಿಗೆ ತೆರಳಿದ್ದರು. ಮಾರ್ಗ ಮಧ್ಯದಲ್ಲಿ ನಿಂತಿದ್ದ ಒಂಟಿ ಸಲಗದ ವಿಡಿಯೋ ಮಾಡುತ್ತಿದ್ದ ವೇಳೆ ರೊಚಿಗೆದ್ದ ಒಂಟಿ ಸಲಗ ಪ್ರವಾಸಿಗರನ್ನು ಅಟ್ಟಾಡಿಸಿದೆ. ಆದರೆ ಚಾಲಕ ವಾಹನವನ್ನು ವೇಗವಾಗಿ ಚಾಲನೆ ಮಾಡಿ ಪ್ರವಾಸಿಗರ ರಕ್ಷಣೆ ಮಾಡಿದ್ದಾರೆ. ನಂತರ ವಾಹನ ಮುಂದೆ ಬಂದ ನಂತರ ಆನೆ ರಸ್ತೆ ಮಾರ್ಗದಲ್ಲಿಯೇ ನಿಂತು ಫೋಟೋಗೆ ಪೋಸ್ ನೀಡಿದೆ.
ಇದನ್ನೂ ಓದಿ:- ಡೆತ್‌ನೋಟ್ ಬರೆದಿಟ್ಟು ಅರಣ್ಯ ವೀಕ್ಷಕ ಆತ್ಮಹತ್ಯೆ





