Mysore
25
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಧೃವನಾರಾಯಣ್‌ ಅವರ ದಾರಿಯಲ್ಲೆ ಬೋಸ್‌ ನಡೆಯಲಿ : ಸಿಎಂ ಸಿದ್ದರಾಮಯ್ಯ !

ಚಾಮರಾಜನಗರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನಿಲ್ ಬೋಸ್ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಅವರು, ಚಾಮರಾಜನಗರ ಲೋಕಸಭಾ ಸದಸ್ಯರಾಗಿದ್ದ ಧೃವನಾರಾಯಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಮೂಲಕ ಜನರ ಪ್ರೀತಿ ವಿಶ್ವಾಸವನ್ನು ಸಂಪಾದಿಸಿದ್ದಾರೆ.

ಸಂಸದರಾಗಿ ಇಡೀ ದೇಶದಲ್ಲೇ ನಂ.೧ ಸ್ಥಾನ ಪಡೆದಿದ್ದವರು ಧೃವನಾರಾಯಣ್‌. ಅದೇ ರೀತಿಯ ಹೆಸರನ್ನು ಸುನಿಲ್‌ ಬೋಸ್‌ ಅವರು ಗಳಿಸಬೇಕು ಎಂಬುದು ನಮ್ಮೆಲ್ಲ ಇಚ್ಚೆ ಎಂದು ಅಭಿಪ್ರಾಯ ತಿಳಿಸಿದರು.

ಚಾಮರಾಜನಗರದ  ೮ ವಿಧಾನಸಭಾ ಕ್ಷೇತ್ರದಲ್ಲಿ ೭ರಲ್ಲಿ ನಮ್ಮ ಪಕ್ಷದ ಶಾಸಕರಿದ್ದಾರೆ. ಹನೂರಿನಲ್ಲಿ ಮಾತ್ರ ರವೀಂದ್ರ ಸೋತರು. ಆದರೆ ಈ ಬಾರಿ ಹನೂರಿನಲ್ಲೂ ಬಹುಮತ ಸಿಗುತ್ತದೆ ಎಂಬ ವಿಶ್ವಾಸ ಇದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಸುನಿಲ್‌ ಬೋಸ್‌ ಮೂರು ಲಕ್ಷ ಮತಗಳ ಅಂತರದಿಂದ ಗೆದ್ದು ಲೋಕಸಭೆಗೆ ಪ್ರವೇಶ ಮಾಡುವ ಮೂಲಕ ರಾಜಕೀಯ ಪ್ರಾರಂಭ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

ಈ ವೇಳೆ ಬೃಹತ್ ರ್ಯಾಲಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಸುನಿಲ್ ಬೋಸ್ ಜತೆಗಿದ್ದರು

Tags: