ಚಾಮರಾಜನಗರ: ತಾಲ್ಲೂಕಿನ ಗೂಳಿಪುರ, ಕೆಂಪನಪುರ, ಹೊಮ್ಮ ಹಾಗೂ ಅಂಬಳೆ ಗ್ರಾಮಗಳ ಸುತ್ತಮುತ್ತಲಿನ ಜಮೀನುಗಳಲ್ಲಿ ಸುಮಾರು ದಿನಗಳಿಂದ ಚಿರತೆ ಅಡ್ಡಾಡುತ್ತಿದೆ.
ಗೂಳಿಪುರದ ಮೂಗನಾಯಕ ಎಂಬುವವರ ಜಮೀನಿನಲ್ಲಿ ಚಿರತೆ ಓಡಾಡಿದ್ದು, ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಚಿರತೆ ಸೆರೆಗೆ ಬೋನು ಇಡುವುದಾಗಿ ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ.
ಚಿರತೆ ಓಡಾಡುತ್ತಾ ಇರುವುದರಿಂದ ಜಮೀನುಗಳಿಗೆ ಹೋಗಲು ತುಂಬಾ ತೊಂದರೆ ಆಗುತ್ತಿದೆ. ನಮ್ಮ ಫಸಲು ನಾಶವಾಗುತ್ತಿದೆ. ಚಿರತೆಯನ್ನು ಸೆರೆ ಹಿಡಿದು ಓಡಾಡಲು ಅನುಕೂಲ ಮಾಡಿಕೊಡಿ ಎಂದು ಗೂಳಿಪುರದ ರಾಜಣ್ಣ ಸೇರಿದಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ





