ಗುಂಡ್ಲುಪೇಟೆ : ತಾಲ್ಲೂಕಿನ ಬರಗಿ ಗ್ರಾಮದ ಜಮೀನುಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ವಿಚಾರವಾಗಿ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವಂತೆ ರೈತರಿಂದ ಒತ್ತಾಯ ಕೇಳಿ ಬಂದಿತ್ತು.
ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯಲು ಕೂಂಬಿಂಗ್ ನಡೆಸಿ ಚಿರತೆ ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ಅನಸ್ತೇಶಿಯಾ ಶೂಟರ್ ವಾಸಿಂ ಮಿರ್ಜಾ ಅವರ ಮೂಲಕ ಚಿರತೆ ಸೆರೆ ಹಿಡಿಯಲಾಗಿದೆ.
ಚಿರತೆಯ ಹಿಂಬದಿ ಸ್ವಲ್ಪ ಗಾಯವಾದ್ದರಿಂದ ಚಿರತೆಯನ್ನು ಬೆಂಗಳೂರಿನ ಬನ್ನೇರುಘಟ್ಟಕ್ಲೆ ಸ್ಥಳಾಂತರಿಸಲಾಗಿದೆ ಎಂದು ಓಂಕಾರ್ ವಲಯಾಧಿಕಾರಿ ಹನುಮಂತಪ್ಪ ತಿಳಿಸಿದರು.
ಎಸಿಫ್ ಸುರೇಶ್ ಕುಮಾರ್, ಹರ್ಷಿತಾ, ಸಿಬ್ಬಂದಿ ಹಾಜರಿದ್ದರು.





