Mysore
28
overcast clouds

Social Media

ಗುರುವಾರ, 13 ಮಾರ್ಚ್ 2025
Light
Dark

ಬಸ್ ಪ್ರಯಾಣದಲ್ಲಿ ಮೃತಪಟ್ಟ ಮಹಿಳೆ ಕುಟುಂಬಕ್ಕೆ ಕೆಎಸ್‌ಆರ್‌ಟಿಸಿ ಯಿಂದ 10 ಲಕ್ಷ ರೂ. ಪರಿಹಾರ

ಚಾಮರಾಜನಗರ: ಗುಂಡ್ಲುಪೇಟೆಗೆ ಕೆಎಸ್ಆರ್‌ಟಿಸಿ ಬಸ್‌ ಕಾರ್ಯಾಚರಣೆ ಮಾಡುವ ವೇಳೆ ಎದುರಿಗೆ ಬಂದು ಗೂಡ್ಸ್‌ ವಾಹನ ಡಿಕ್ಕಿಯಿಂದ ಬಸ್‌ ಒಳಗಿದ್ದ ಮಹಿಳೆಯ ಬುರುಡೆ ತುಂಡರಸಿ ಮೃತಪಟ್ಟ ಕುಟುಂಬಕ್ಕೆ ಸಂಸ್ಥೆಯ ಅಧಿಕಾರಿ ಆಶೋಕ್‌ ಕುಮಾರ್‌ 10 ಲಕ್ಷ ರೂ. ಪರಿಹಾರ ನೀಡಿದ್ದಾರೆ.

ಮೃತಪಟ್ಟ ಮಹಿಳೆ ಗುಂಡ್ಲುಪೇಟೆ ತಾಲೂಕಿನ ಹಾಲನಹಳ್ಳಿ ಗ್ರಾಮದ ಶಿವಲಿಂಗಮ್ಮ.

ಕೆಎಸ್‌ಆರ್‌ಟಿಸಿ ಬಸ್‌ ನಂಜನಗೂಡು ಮಾರ್ಗವಾಗಿ ಗುಂಡ್ಲಪೇಟೆಗೆ ಹೋಗುವ ವೇಳೆ ಕಡುಬಿನ ಕಟ್ಟೆ ಹತಿರ ಕಾರನ್ನು ಓವರ್ಟೇಕ್‌ ಮಾಡಲು ಹೋಗಿ ಮಧ್ಯಭಾಗಕ್ಕೆ ಬಂದಿದೆ. ಈ ವೇಳೆ ಶಿವಲಿಂಗಮ್ಮ ತಲೆಯನ್ನು ಕಿಟಕಿಯಿಂದ ಹೊರಹಾಕಿದ ಪರಿಣಾಮ  ಎದುರಿಗೆ ಬಂದು ಗೂಡ್ಸ್‌ ವಾಹನವೊಂದು ಡಿಕ್ಕಿ ಹೊಡೆದು ರುಂಡವು ತುಂಡರಿಸಿತ್ತು.

ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಭಾಗದ ನಿಯಂತ್ರಣಾಧಿಕಾರಿ ಆಶೋಕ್‌ ಕುಮಾರ್‌ ಮೃತರ ಮಗ ಕಾರ್ತಿಕ್‌ ಅವರಿಗೆ 10 ಲಕ್ಷ ರೂ.ಗಳ ಚೆಕ್‌ ಅನ್ನು ಪರಿಹಾರವಾಗಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ವಿಭಾಗೀಯ ಸಂಚಲನಾಧಿಕಾರಿ ಎಸ್‌.ಎಸ್‌.ದಶರಥ, ಸಹಾಯಕ ಕಾನೂನು ಅಧಿಕಾರಿ ಶಿವಣ್ಣ, ಸಹಾಯಕ ಲೆಕ್ಕಾಧಿಕಾರಿ ರುದ್ರಮುನಿ,  ಭದ್ರತಾ ನಿರೀಕ್ಷಕ ನಾಗೇಂದ್ರ ಇದ್ದರು.

 

 

Tags: