ಕೊಳ್ಳೇಗಾಲ: 16 ಕೆಜಿಗಳಷ್ಟು ತಿಮಿಂಗಿಲ ವಾಂತಿಯನ್ನು (ಅಂಬರ್ ಗ್ರೀಸ್) ಸಾಗಣೆ ಮಾಡುತ್ತಿದ್ದ ನಾಲ್ವರನ್ನು ನಗರದ ಅರಣ್ಯ ಸಂಚಾರಿ ದಳದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮಂಗಳೂರು ಜಿಲ್ಲೆಯ ಉಡುಪಿ ಮೂಲದ ಇಮ್ಮಿಯಾಜ್ ಅಬ್ದುಲ್ ರೆಹಮಾನ್, ಮಂಗಳೂರಿನ ಚಿತ್ರಂಜಲಿ ನಗರದ ನಿವಾಸಿ ಚೇತನ್ ಕುಮಾರ್, ಮಂಗಳೂರು ತಾಲ್ಲೂಕಿನ ಉಳ್ಳಾಲ ಗ್ರಾಮದ ಶೇಷಪ್ಪ, ಮಂಗಳೂರಿನ ಸುರತ್ಕಲ್ ನಿವಾಸಿ ವೆಂಕಟೇಶ್ ಬಂಧಿತರಾಗಿದ್ದಾರೆ.
ತಮಿಳುನಾಡಿನ ಸೇಲಂ ಕಾಳಸಂತೆಯಲ್ಲಿ ಮಾರಲು ತಯಾರಿ ನಡೆಸಿದ್ದು, ತಾಲ್ಲೂಕಿನ ಸತ್ತೇಗಾಲ ಗ್ರಾಮದ ಹ್ಯಾಂಡ್ ಪೋಸ್ಟ್ ಬಳಿ ನಂತರ ಟೀ ಕುಡಿಯಲು ನಿಂತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದೆ ಪಿಎಸ್‌ಐ ವಿಜಯರಾಜು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದರು.
ನಂತರ ಅವರ ಬಳಿ ಇದ್ದ ತಿಮಿಂಗಲ ವಾಂತಿ, ಮೊಬೈಲ್ ಫೋನ್, ಕಾರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.