ಕೊಳ್ಳೇಗಾಲ : ಮುಡಿಗುಂಡ ರೇಷ್ಮೆ ಗೂಡಿನ ಮಾರುಕಟ್ಟೆ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಸಿಗ್ನಲ್ ನೀಡದೆ ನಿಲುಗಡೆ ಮಾಡಿದ ಪರಿಣಾಮ ಎರಡು ಕಾರು, ಒಂದು ಖಾಸಗಿ ಲಾರಿ ಜಖಂಗೊಂಡಿರುವ ಘಟನೆ ಜರುಗಿದೆ.
ಅದೃಷ್ಟವಶಾತ್ ವಾಹನದಲ್ಲಿದ್ದ ಯಾರಿಗೂ ಯಾವುದೇ ಅಹಿತಕರ ಘಟನೆಗಳು ಉಂಟಾಗಿಲ್ಲ.
ವಾಹನ ಚಾಲಕರುಗಳು ವಾಹನಗಳಿಗೆ ಉಂಟಾಗಿರುವ ನಷ್ಟವನ್ನು ಭರಿಸುವಂತೆ ಕೆ.ಎಸ್.ಆರ್.ಟಿ.ಸಿ ಚಾಲಕ ಒತ್ತಾಯಿಸಿದ್ದಾರೆ. ಸದ್ಯ ಜಖಂಗೊಂಡಿರುವ ವಾಹನ ಚಾಲಕರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಸ್ಐ ವರ್ಷ ಅವರು ವಿಚಾರಣೆಗೆ ಒಳಪಡಿಸಿದ್ದಾರೆ.





