ಕೊಳ್ಳೇಗಾಲ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಣಗಾಂಜಾವನ್ನು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ, 462 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಕೊಂಗರಹಳ್ಳಿ ಗ್ರಾಮದ ನಾಗರಾಜು ಅಲಿಯಾಸ್ ಬಕಾಸುರ ಎಂಬಾತ ಗುಂಡಾಲ್ ಕಡೆಯಿಂದ ಕಾಮಗೆರೆ ಕಡೆಗೆ ಬೈಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಅರಿತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ 322 ಗ್ರಾಂ ಒಣಗಾಂಜಾ ಮತ್ತು ಬೈಕ್ ಅನ್ನು ಜಪ್ತಿ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ತಾಲ್ಲೂಕಿನ ಇರಮ್ಮಾನದೊಡ್ಡಿ ಗ್ರಾಮದಲ್ಲಿ ರಂಗೇಗೌಡ ಎಂಬಾತನಿಂದ 140 ಗ್ರಾಂ ಒಣಗಾಂಜಾವನ್ನು ಜಪ್ತಿ ಮಾಡಿ ಆರೋಪಿಯನ್ನು ಬಂದೀಸಿದ್ದಾರೆ. ದಾಳಿಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಎಸ್.ಎ.ಸುಪ್ರೀತ್, ಎಎಸ್‌ಐ ಗೋವಿಂದ, ಪೇದೆಗಳಾದ ಡಿ.ಎಸ್.ಪೂಜೇರಿ, ದಿನೇಶ್, ಸಿದ್ದರಾಜು, ವಿಜಯ್ ಕುಮಾರ್ ಭಾಗವಹಿಸಿದ್ದರು.