ಕೊಳ್ಳೇಗಾಲ: ಅಕ್ರಮವಾಗಿ ಕೇರಳ ಲಾಟರಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಗರ ಮಾಂಬಳ್ಳಿ ಠಾಣೆಯ ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ಜರುಗಿದೆ.
ಅಗರ ಗ್ರಾಮದ ಕುಮಾರ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ಐವತ್ತು ರೂ ಮುಖ ಬೆಲೆಯ 80 ಕೇರಳ ಲಾಟರಿಗಳನ್ನು ಜಪ್ತಿ ಮಾಡಲಾಗಿದೆ.
ಈತನು ಬನ್ನಿಸಾರಿಗೆ ರಸ್ತೆಯಲ್ಲಿ ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದನ್ನು ಖಚಿತ ಪಡಿಸಿಕೊಂಡ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಈ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮಜರುಗಿಸಿದ್ದಾರೆ.
ದಾಳಿಯಲ್ಲಿ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಎಸ್ಐ ಕರಿಬಸಪ್ಪ, ಎಎಸ್ಐ ಚಿಕ್ಕಸ್ವಾಮಿ, ಹೆಡ್ ಪರಶಿವಮೂರ್ತಿ, ಕಾನ್ಸಟೇಬಲ್ ಶಿವಕುಮಾರ್ ಇದ್ದರು.





