ಕೊಳ್ಳೇಗಾಲ : ತಾಲೂಕಿನ ಹಳೇ ಹಂಪಾಪುರದಲ್ಲಿ ಕಾವೇರಿ ನದಿ ದಡದಲ್ಲಿ ಸೋನಾಕ್ಷಿಯ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರನ ಮನೆ ಮೇಲೆ ಮಹಿಳೆಯ ಸಂಬಂಧಿಕರು ದಾಳಿ ನಡೆಸಿದ್ದಾರೆ.
ಸೋನಾಕ್ಷಿಯನ್ನು ಕೊಂದನೆಂದು ಆಕೆಯ ಸಂಬಂಧಿಕರು ಕುಪಿತಗೊಂಡು ಏಕಾಏಕಿ ಕೊಳ್ಳೇಗಾಲ ಮೋಳೆ ಗ್ರಾಮದಲ್ಲಿರುವ ಆರೋಪಿ ಮಾದೇಶ್ ಮನೆ ಮೇಲೆ ದಾಳಿ ಮಾಡಿದ್ದು ಹೆಂಚುಗಳು, ಛಾವಣಿ, ಬಾಗಿಲು ಜಖಂ ಆಗಿವೆ. ಮನೆಗೆ ನುಗ್ಗಿ ಮನೆಯಲ್ಲಿದ್ದ ಟಿವಿ ಮತ್ತಿತರ ವಸ್ತುಗಳನ್ನು ದ್ವಂಸ ಮಾಡಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ.
ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಈ ಸಂಬಂಧ ಯಾರೂ ದೂರು ನೀಡದಿದ್ದರಿಂದ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಳ್ಳೇಗಾಲ ತಾಲ್ಲೂಕು ಹಳೇ ಹಂಪಾಪುರದಲ್ಲಿ ಸೋನಾಕ್ಷಿ ಎಂಬಾಕೆಯನ್ನು ಮಾಜಿ ಪ್ರಿಯಕರ ಮಾದೇಶ ಕೊಲೆ ಮಾಡಿ ಹೂತು ಹಾಕಿದ್ದನು.ಆತನನ್ನು ಪೊಲೀಸರು ಬಂಧಿಸಿದ ನಂತರ ಈ ಘಟನೆ ನಡೆದಿದೆ.





