ಕೊಳ್ಳೇಗಾಲ : ತಾಲ್ಲೂಕಿನ ಕುಂತೂರು ಗ್ರಾಮದಲ್ಲಿ ದಂಪತಿಗಳಿಬ್ಬರು ಬೆಂಕಿ ಹಚ್ಚಿಕೊಂಡು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜರುಗಿದೆ.
ಕುಂತೂರು ಗ್ರಾಮದ ಮಹೇಶ್(30) ಸುಧಾ(25) ಬೆಂಕಿ ಹೊತ್ತಿಸಿಕೊಂಡು ಗಾಯಗೊಂಡವರು.
ಟಿ.ನರಸೀಪುರದ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುವುದು ಬೇಡ ಎಂದು ಮಹೇಶ್ ತನ್ನ ಪತ್ನಿ ಸುಧಾಳಿಗೆ ಹೇಳಿದ ಹಿನ್ನಲ್ಲೆ ಶುಕ್ರವಾರ ಬೆಳಿಗ್ಗೆ ಮನೆಯಲ್ಲಿದ್ದ ಸೀಮೆಎಣ್ಣೆಯನ್ನು ಸುಧಾ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಇದನ್ನು ಕಂಡ ಮಹೇಶ್ ಬೆಂಕಿ ನಂದಿಸಲು ಮುಂದಾದಾಗ ಸುಧಾ ತನ್ನ ಗಂಡನನ್ನು ತಬ್ಬಿಡಿದುಕೊಂಡಿದ್ದಾಳೆ. ಇದನ್ನು ಕಂಡ ಸ್ಥಳೀಯರು ತಕ್ಷಣ ಮನೆಯೊಳಗೆ ನುಗ್ಗಿ ಬೆಂಕಿ ನಂದಿಸಿ ಬೆಂಕಿಯಲ್ಲಿ ಗಾಯಗೊಂಡಿದ್ದ ದಂಪತಿಗಳಿಬ್ಬರನ್ನು ಆಸ್ಪತ್ರೆಗೆ ಕರೆ ತಂದಿದ್ದಾರೆ.
ಇದನ್ನು ಕಂಡ ಸ್ಥಳೀಯರು ತಕ್ಷಣ ಬೆಂಕಿಯನ್ನು ನಂದಿಸಿ ಕೊಳ್ಳೇಗಾಲ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಾ.ನಗರ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ವರದಿ : ಗಿರೀಶ್ ಕೊಳ್ಳೇಗಾಲ