Mysore
18
few clouds

Social Media

ಶನಿವಾರ, 24 ಜನವರಿ 2026
Light
Dark

ಕೊಳ್ಳೇಗಾಲ | ಅಕ್ಕಿ ಕದ್ದಿದ್ದ ಇಬ್ಬರ ಬಂಧನ

ಕೊಳ್ಳೇಗಾಲ: ಶಿವರಾತ್ರಿ ಹಬ್ಬದ ದಿನ ರಾತ್ರಿ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ಆಹಾರ ನಿಗಮದ ಸಗಟು ಮಳಿಗೆಯಲ್ಲಿ ದಾಸ್ತಾನು ಇಟ್ಟಿದ್ದ 6900 ಕೆಜಿ ಅಕ್ಕಿಯನ್ನು ಕದ್ದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಆರೋಪಿಗಳು ತುಮಕೂರು ಜಿಲ್ಲಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಕೊಬ್ಬರಿ ಕಳವು ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಇವರನ್ನು ಬೆರಳಚ್ಚು ಆಧಾರದ ಮೇಲೆ ಪತ್ತೆ ಮಾಡುವಲ್ಲಿ ಕೊಳ್ಳೇಗಾಲದ ಪೊಲೀಸರು ಯಶಸ್ವಿಯಾಗಿದ್ದಾರೆ.

ತುಮಕೂರು ಜೈಲಿನಲ್ಲಿರುವ ಇವರನ್ನು ನ್ಯಾಯಾಲಯದ ಅನುಮತಿ ಜೊತೆಗೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಅಕ್ಕಿ ಕದ್ದಿದ್ದನ್ನು ಒಪ್ಪಿಕೊಂಡಿದ್ದಾರೆ.

ದೊಡ್ಡ ಕವಲಂದೆ ಸದ್ದಾಂ ಹುಸೇನ್, ಮೈಸೂರಿನ ರಾಹಿಲ್ ಬಂಧಿತರು. ಇವರಿಂದ ಕದ್ದಿದ್ದ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ.
16 ವರ್ಷದ ಬಾಲ ಅಪರಾಧಿಯನ್ನು ಇನ್ನೂ ವಶಕ್ಕೆ ಪಡೆದಿಲ್ಲ. ಸಿಪಿಐ ಶಿವಮಾದಯ್ಯ ಹಾಗೂ ಅವರ ತಂಡದವರು ಪ್ರಕರಣ ಭೇದಿಸಿದ್ದಾರೆ.

Tags:
error: Content is protected !!