ಕೊಳ್ಳೇಗಾಲ: ಇಲ್ಲಿನ ಮಧುವನಹಳ್ಳಿ ಲೊಕ್ಕನಹಳ್ಳಿ ರಸ್ತೆಯಲ್ಲಿ 566 ಗ್ರಾಂ ಒಣಗಾಂಜಾವನ್ನು ಗ್ರಾಮಾಂತರ ಪೊಲೀಸರು ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮಧುವನಹಳ್ಳಿ ಗ್ರಾಮದ ನಟರಾಜು(48). ಒಣಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಸುಪ್ರೀತ್ ಹಾಗೂ ಅವರ ತಂಡದವರು ದಾಳಿ ಮಾಡಿ ಆರೋಪಿಯನ್ನು ತಪಾಸಣೆಗೆ ಒಳಪಡಿಸಿದಾಗ 566 ಗ್ರಾಂ ಒಣಗಾಂಜಾ ಪತ್ತೆಯಾಗಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಬಂಧಿತ ಆರೋಪಿಯನ್ನು ನ್ಯಾಯಾಂಗ ಮುಂದೆ ಹಾಜರು ಪಡಿಸಲಾಗಿದೆ.





