Mysore
19
few clouds
Light
Dark

ಕಾವೇರಿ ನದಿ ಆರ್ಭಟಕ್ಕೆ ಹೊಗೇನಕಲ್‌ನಲ್ಲಿ ಜಲಪಾತವೇ ಕಣ್ಮರೆ

ಚಾಮರಾಜನಗರ: ಕಾವೇರಿ ನದಿ ಆರ್ಭಟಕ್ಕೆ ಹೊಗೇನಕಲ್‌ನಲ್ಲಿ ಜಲಪಾತವೇ ಕಣ್ಮರೆಯಾಗಿದೆ.

ಕಾವೇರಿ ಜಲಾನಯದ ಪ್ರದೇಶದಲ್ಲಿ ಭಾರೀ ಮಳೆಯಾದ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನು ಕಾವೇರಿ ನದಿಗೆ ಬಿಡಲಾಗಿದೆ.

ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ಹೊಗೇನಕಲ್‌ನಲ್ಲಿ ಜಲಪಾತವೇ ಕಣ್ಮರೆಯಾಗಿದೆ. 72 ಅಡಿ ಎತ್ತರದಿಂದ ಆರ್ಭಟಿಸುತ್ತಾ ಧುಮ್ಮಿಕ್ಕುತ್ತಿದ್ದ ಹೊಗೇನಕಲ್‌ನಲ್ಲಿ ಜಲಪಾತವೇ ಕಣ್ಮರೆಯಾಗುವ ರೀತಿಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.

ಕಾವೇರಿ ನದಿಯು ತನ್ನ ಉದ್ದಗಲಕ್ಕೂ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನತೆ ಭಯಭೀತರಾಗಿದ್ದಾರೆ.