ಹನೂರು: ತಾಲ್ಲೂಕಿನ ಕೌದಳ್ಳಿ ಗ್ರಾಮ ಕೌದಳ್ಳಿ ಗ್ರಾಮ ಪಂಚಾಯತಿ ಸೇರಿದ್ದು, ಕರ್ನಾಟಕ ರಾಜ್ಯದ ಎರಡನೇ ಅತಿ ಹೆಚ್ಚು ಲಾಭ ಗಳಿಸುವ ಮೇಲೆ ಮಹದೇಶ್ವರ ಬೆಟ್ಟದ ಮಾದಪ್ಪನ ದೇವಸ್ಥಾನಕ್ಕೆ ಹಾದು ಹೋಗುವ ಮುಖ್ಯ ರಸ್ತೆಯಲ್ಲಿ ಇದೆ. ಮತ್ತು ತಮಿಳುನಾಡು ಕರ್ನಾಟಕ ಸಂಪರ್ಕಿಸುವ ಹೆದ್ದಾರಿ. ಸ್ವಾತಂತ್ರ ಪೂರ್ವದಲ್ಲಿದ್ದ ಗ್ರಾಮದ ರೀತಿಯಲ್ಲಿಯೇ ಇರುವ ಈ ಗ್ರಾಮ ಹೆಚ್ಚು ಮುಸ್ಲಿಂ ಮತ್ತು ನಾಯಕ ಜನಾಂಗ ಇರುವ ದೊಡ್ಡ ಗ್ರಾಮ. ಮೊದಲಿಂದಲೂ ಕೌದಳ್ಳಿ ಗ್ರಾಮ ಅನೈರ್ಮಲ್ಯ ಎದ್ದು ಕಾಣುತ್ತಿದೆ.ಯಾವ ಆಡಳಿತವು ಮಂಡಳಿ ಗ್ರಾಮ ಪಂಚಾಯತಿಯಲ್ಲಿ ಅಸ್ತಿತ್ವಕ್ಕೆ ಬಂದರು ಶಾಶ್ವತ ಪರಿಹಾರ ಕಾಣಲೇ ಇಲ್ಲ. ಕಿರಿದಾದ ರಸ್ತೆ, ಹೂಳು ತುಂಬಿರುವ ಚರಂಡಿ, ಕಸದ ರಾಶಿ ರಾಶಿ ಗುಡ್ಡೆಗಳು ಸಾಮಾನ್ಯವಾಗಿದೆ.
ಮೂಲಭೂತ ಸೌಕರ್ಯ ವಂಚಿತ ಗ್ರಾಮಸ್ಥರಆಕ್ರೋಶ: ಕೌದಳ್ಳಿಯ ನಾಯಕ ಸಮುದಾಯದ ಕೆಲವು ಬೀದಿ ಬೀದಿಗಳಲ್ಲಿ ಸರಿಯಾದ ಸಿ ಸಿ ರಸ್ತೆ ಗಳು ಇಲ್ಲ ಮತ್ತೆ ಚರಂಡಿ ಗಳು ಇಲ್ಲ ಇದರಿಂದ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಕೆಲವು ಕಡೆ ಮಡುಗಟ್ಟಿ ನಿಂತಿದೆ.ಇದರಿಂದ ಅನೈರ್ಮಲ್ಯ ಉಂಟಾಗುತ್ತದೆ ಜತೆಗೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಪರಿಣಾಮ ಎಲ್ಲೆಲೂ ಕಸದ ರಾಶಿ ಉಂಟಾಗಿದೆ ಇದರಿಂದ ಕೌದಳ್ಳಿ ಗ್ರಾಮವು ಕಸದ ಹಳ್ಳಿಯಾಗಿ ಮಾರ್ಪಟ್ಟಿದೆ
ಇಲ್ಲಿನ ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದ್ದು ಮತ್ತೆ ಸೊಳ್ಳೆಗಳ ಕಾಟ ವಿಪರೀತ ಮಳೆ ಬಂತೆಂದರೆ ಕಸದ ರಾಶಿ ಕೊಳೆತ ತ್ಯಾಜ್ಯವಾಗಿ ಮಾರ್ಪಟ್ಟು ದುರ್ವಾಸನೆ ಬಿರುತ್ತಿದೆ ಇದರಿಂದ ಜನರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಎದುರಾಗುತ್ತದೆ.