Mysore
25
few clouds

Social Media

ಗುರುವಾರ, 22 ಜನವರಿ 2026
Light
Dark

ಫಹಲ್ಗಾಮ್‌ ಉಗ್ರದಾಳಿಯಲ್ಲಿ ಗುಪ್ತಚರ ವೈಫಲ್ಯ : ಸಿಎಂ ಸಿದ್ದರಾಮಯ್ಯ

ಹನೂರು: ಕಾಶ್ಮೀರದ ಉಗ್ರದಾಳಿಯಲ್ಲಿ ಗುಪ್ತಚರ ಇಲಾಖೆ ವೈಫಲ್ಯ (Intelligence failure) ಇದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಪುಲ್ವಾಮ ದಾಳಿಯಲ್ಲಿ 40 ಮಂದಿ ಸೈನಿಕರು ಅಸುನೀಗಿದ್ದರು‌, ಮೊನ್ನೆ ಘಟನೆಯಲ್ಲಿ 26 ಮಂದಿ ನಾಗರಿಕರು ಅಸುನೀಗಿದ್ದಾರೆ. ಪುಲ್ವಾಮ ದಾಳಿ ಬಳಿಕ ಕೇಂದ್ರ ಸರ್ಕಾರ ವಿರಮಿಸಬಾರದಿತ್ತು, ಮೂರನೇ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ಮೊನ್ನೆ ನಡೆದ ಉಗ್ರದಾಳಿ ಅತ್ಯಂತ ಅಮಾನವೀಯ ಹೇಯ ಕೃತ್ಯ, ಮೃತ ಕುಟುಂಬಸ್ಥರ ಜೊತೆ ನಾವಿದ್ದು ಎಲ್ಲರಿಗೂ 10 ಲಕ್ಷ ಪರಿಹಾರ ಕೊಟ್ಟಿದ್ದೇವೆ, ಬಹಳ ಎಚ್ಚರಿಕೆಯಿಂದ ಇರಬೇಕೆಂರು ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.

ಉಗ್ರರು ಎಲ್ಲೇ ಇರಲಿ, ಯಾವ ಜಾತಿ- ಧರ್ಮದವರೇ ಆಗಿರಲಿ ಅವರನ್ನು ಮಟ್ಟ ಹಾಕಬೇಕು, ಕೇಂದ್ರ ಸರ್ಕಾರವು ಉಗ್ರ ಚಟುವಟಿಕೆ ಬೆಳೆಯಲು, ನಡೆಸಲು ಕೇಂದ್ರ ಸರ್ಕಾರ ಅವಕಾಶ ಕೊಡಬಾರದು ಎಂದರು.

ಇದೇ ವೇಳೆ ಮೇಕೆದಾಟು ವಿಚಾರ ಸಂಬಂಧ ಮಾತನಾಡಿ , ಮೇಕೆದಾಟು ಯೋಜನೆಗೆ ಅನುಮತಿ ಕೊಡಬೇಕಿರುವುದು ಕೇಂದ್ರ ಸರ್ಕಾರ. ಅವರು ಇಂದು ಅನುಮತಿ ಕೊಟ್ಟರೇ ನಾಳೆಯಿಂದಲೇ ಯೋಜನೆ ಅನುಷ್ಟಾನ ಮಾಡುತ್ತೇವೆ. ಕೇಂದ್ರ ಸರ್ಕಾರ ಘೋಚಣೆ ಮಾಡಿದ ಅನುದಾನವನ್ನೇ ಕೊಡುತ್ತಿಲ್ಲ, ರಾಜಕೀಯ ದ್ವೇಷದ ಕಾರಣ ಎನಿಸುತ್ತದೆ ಎಂದರು.

Tags:
error: Content is protected !!