ಚಾಮರಾಜನಗರ: ತಾಲ್ಲೂಕಿನ ಅರಕಲವಾಡಿ ಗ್ರಾಮದ ಬಳಿಯ ಕಲ್ಲು ಕ್ವಾರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಪೋಟಕ ವಸ್ತುಗಳು ಹಾಗೂ ಒಬ್ಬನನ್ನು ನಗರದ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗ್ರಾಮದ ಹೊರವಲಯದಲ್ಲಿರುವ ಶಾಂತಕುಮಾರ್ ಎಂಬವರ ಕಲ್ಲು ಕ್ವಾರಿಯೊಂದರಲ್ಲಿ ಅಕ್ರಮವಾಗಿ ಸೋಟಕ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಆಧರಿಸಿ ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಿಹಾನಾ ಬೇಗಂ ಮತ್ತು ಪೇದೆಗಳು ಇತ್ತೀಚೆಗೆ ದಾಳಿ ನಡೆಸಿದ್ದರು.
ಕಲ್ಲು ಬಂಡೆಗಳ ಬಳಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ೫೩ ಜೆಲ್‌ಸ್ಟಿಕ್‌ಗಳು (ತೋಟ) ಹಾಗೂ ೨೦ ಇಡಿ (ಎಲೆಕ್ಟ್ರಾನಿಕ್ ಡೆಟೋನೇಟರ್) ಇರುವುದು ಕಂಡುಬಂತು. ನಂತರ ಕ್ವಾರಿಯಲ್ಲಿದ್ದ ವ್ಯವಸ್ಥಾಪಕ ಯಳಂದೂರಿನ ಸಿ.ಆಕಾಶ್ ಸ್ಛೋಟಕ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದರು.
ಆಕಾಶ್ ಹಾಗೂ ಸ್ಪೋಟಕಗಳಿದ್ದ ಪ್ಲಾಸ್ಟಿಕ್ ಚೀಲವನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ.೧೭೪/೨೦೨೫ ಕಲಂ ೯ಬಿ (೧)ಬಿ ಸ್ಪೋಟಕ ಕಾಯ್ದೆ-೧೮೮೪ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.





