ಹನೂರು: ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳ್ಯದ ಬಯಲು ಗ್ರಾಮದಲ್ಲಿ ಪತಿಯೇ ಪತ್ನಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಬುಧವಾರ ಬೆಳಗ್ಗೆ ಜರುಗಿದೆ.
ತಾಲೂಕಿನ ಒಡೆಯರ ಪಾಳ್ಯ ಸಮೀಪದ ಗುಳ್ಯದ ಬಯಲು ಗ್ರಾಮದ ನಿವಾಸಿ ಭದ್ರಾ ಎಂಬುವನು ತನ್ನ ಪತ್ನಿ ಮಾದೇವಿಗೆ ಚಾಕು ಹಿರಿದು ಹತ್ಯೆ ಮಾಡಿದ್ದಾನೆ.
ಭದ್ರಾ ಹಾಗೂ ಮಾದೇವಿ ದಂಪತಿಗಳ ಮಧ್ಯ ಆಗಾಗ ಕಲಹ ನಡೆಯುತ್ತಿತ್ತು ಎಂದು ತಿಳಿದು ಬಂದಿದ್ದು ತಡ ರಾತ್ರಿಯು ಕಲಹ ನಡೆದು ಗಂಡ ಭದ್ರಾ ಕೋಪಗೊಂಡು ಮಾದೇವಿಗೆ ಚಾಕು ಹಿರಿದು ಹತ್ಯೆ ಮಾಡಿದ್ದಾನೆ ಎಂದು ಮೃತ ಮಾದೇವಿಯ ಸಹೋದರ ಮಾದಪ್ಪ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:- ಕೊಡಗಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ
ಪ್ರಕರಣ ದಾಖಲಾಗುತ್ತಿದ್ದಂತೆ ಇನ್ಸ್ಪೆಕ್ಟರ್ ಆನಂದಮೂರ್ತಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮೃತ ಮಾದೇವಿ ಪತಿ ಭದ್ರಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯ ನಂತರ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ.





