Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಬಿಳಿಗಿರಿರಂಗನ ಬೆಟ್ಟದಲ್ಲಿ ಹುಂಡಿ ಎಣಿಕೆ : 37.74 ಲಕ್ಷ ರೂ.ಸಂಗ್ರಹ

200 ಅಮೆರಿಕನ್ ಡಾಲರ್, 10 ಕೆನಡಾ ಡಾಲರ್,  ರಂಗನಾಥನಿಗೆ ಭಕ್ತರು ನೀಡಿದ್ದಾರೆ.

ಚಾಮರಾಜನಗರ : ಜಿಲ್ಲೆಯ ಯಳಂದೂರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದ ದೇವಾಲಯ ಹುಂಡಿ ಎಣಿಕೆಯು 3 ತಿಂಗಳ ಬಳಿಕ ನಡೆದಿದ್ದು 37 ಲಕ್ಷರೂ. ಸಂಗ್ರಹವಾಗಿದ್ದು ಡಾಲರ್ ಗಳನ್ನು ವಿದೇಶಿ ಭಕ್ತರು ಅರ್ಪಿಸಿದ್ದಾರೆ.

ಕಳೆದ 3 ತಿಂಗಳ ಬಳಿಕ ನಡೆದ ಹುಂಡಿ ಎಣಿಕೆಯಲ್ಲಿ 37,74,562 ರೂ. ಹಣ ಸಂಗ್ರಹವಾಗಿದ್ದು, 200 ಅಮೆರಿಕನ್ ಡಾಲರ್, 10 ಕೆನಡಾ ಡಾಲರ್   ಕೂಡ ರಂಗನಾಥನಿಗೆ ಭಕ್ತರು ಅರ್ಪಿಸಿದ್ದಾರೆ. ವಿದೇಶಿಗರು ಇಲ್ಲಿನ ಬೆಟ್ಟಕ್ಕೆ ಭೇಟಿ ಕೊಡುವುದರಿಂದ ಹುಂಡಿಯಲ್ಲಿ ಡಾಲರ್ ಪತ್ತೆಯಾಗಿದೆ.

11 ಸಣ್ಣ ಮಾಂಗಲ್ಯ, 1 ಬೆಳ್ಳಿ ಮುಖವಾಡ, 1 ಪುಟಾಣಿ ಘಂಟೆ- ಆರತಿ, 2 ಬೆಳ್ಳಿ ಕೊಳಲು, 2 ದೇವರ ಮೂರ್ತಿಯನ್ನು ಹರಕೆ ಕೊತ್ತ ಭಕ್ತರು ಕಾಣಿಕೆ ರೂಪದಲ್ಲಿ ಸ್ವಾಮಿಗೆ ಅರ್ಪಿಸಿದ್ದಾರೆ ಎಂದು ಇಒ ಮೋಹನ್ ತಿಳಿಸಿದ್ದಾರೆ.

ಸತತ ಮಳೆ ಪರಿಣಾಮ ಹಸಿರಿನ ಚೆಲುವಿನಿಂದ ಬಿಳಿಗಿರಿರಂಗನ ಬೆಟ್ಟ ಕಂಗೊಳಿಸುತ್ತಿದ್ದು ಭಕ್ತರು, ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ. ವಾರಾಂತ್ಯದಲ್ಲಿ ಪ್ರಕೃತಿ ಚೆಲುವು ಕಣ್ತುಂಬಿಕೊಳ್ಳಲು ಜನಕಿಕ್ಕಿರಿದು ಸೇರುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ