ಯಳಂದೂರು: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹಿಂಗಾರು ಮಳೆ ಚುರುಕು ಪಡೆದುಕೊಂಡಿದ್ದು, ಕಾಫಿ ಬೆಳೆಗೆ ವರದಾನವಾಗಿದೆ.
ಬಿಆರ್‌ಟಿ ಸುತ್ತಮುತ್ತ 3 ವರ್ಷಗಳಿಂದ ಮುಂಗಾರು ಮಳೆಯ ಕೊರತೆ ಕಾಡುತ್ತಿರುವ ಕುಸಿಯುವ ಆತಂಕ ಮನೆಮಾಡಿತ್ತು.
ಆದರೆ ಹಿಂಗಾರು ಮಳೆ ಚುರುಕುಗೊಂಡ ಪರಿಣಾಮ ಆ ಭಾಗದಲ್ಲಿ ಕಾಫಿ ಬೆಳೆಯು ಹಚ್ಚ ಹಸಿರಿನಿಂದ ಕೂಡಿದ್ದು, ಅನ್ನದಾತರ ಮೊಗದಲ್ಲಿ ಮಂದಹಾಸ ಮನೆಮಾಡಿದೆ.
ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ 16 ಹಾಡಿಗಳ 550ಕ್ಕೂ ಹೆಚ್ಚಿನ ರೈತರು ಕಾಫಿ ತೋಟಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ.
ಇವರೆಲ್ಲರೂ ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದು, ಹಿಂಗಾರು ಮಳೆ ಬಿದ್ದ ಹಿನ್ನೆಲೆಯಲ್ಲಿ ಕೃಷಿಕರು ಕೊಂಚ ನಿರಾಳರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕೃಷಿಕರು ಈ ಬಾರಿಯಾದರೂ ಹೆಚ್ಚಿನ ಆದಾಯಗಳಿಸಬಹುದು ಎಂದು ಅಂದಾಜಿನಲ್ಲಿದ್ದಾರೆ.