ಹಳ್ಳಿಕಾರ್ ಜೋಡೆತ್ತುಗಳ ಪ್ರದರ್ಶನ
ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ತಾಲ್ಲೂಕಿನ ಹಸಗೂಲಿ ಗ್ರಾಮದಲ್ಲಿ ಕಳೆದ ವರ್ಷ ಶ್ರೀ ಅಲ್ಲಹಳ್ಳಿ ಪಾರ್ವತಾಂಬೆ ನೂತನ ಸ್ವರ್ಣಕಲ್ಲಿನ ದೇವಾಲಯ ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತು ಫೆ10 2026 ಕ್ಕೆ ದೇವಸ್ಥಾನ ಲೋಕಾರ್ಪಣೆ ಗೊಂಡು ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಹಸಗೂಲಿ ಗ್ರಾಮದಲ್ಲಿ ಒಂದು ವರ್ಷದ ಆರಾಧನೆ ಮಹೋತ್ಸವ ಏರ್ಪಡಿಸಲಾಗಿದೆ.
ತಾಲ್ಲೂಕಿನ ಪ್ರಸಿದ್ದ ಜಾತ್ರೆ ನಡೆಯುವ ಶ್ರೀ ಅಲ್ಲಹಳ್ಳಿ ಪಾರ್ವತಾಂಭೆಯ ದೇವಸ್ಥಾನದ ಮೊದಲ ವರ್ಷದ ಆರಾಧನೆ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗಿಯಾಗುವಂತೆ ಶ್ರೀ ಪಾರ್ವತಾಂಭೆ ಜಾತ್ರಾ ಸಮಿತಿಯವರು ಕೋರಿದ್ದಾರೆ.
ಕಾರ್ಯಕ್ರಮದಲ್ಲಿ ಸುಮಾರು ಐವತ್ತು ಸಾವಿರ ಭಕ್ತರು ಸೇರುವ ಹಿನ್ನಲೆ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಿಸಲಾಗಿದೆ ಅಲ್ಲದೆ ಶ್ರೀ ಸಚ್ಚಿದಾನಂದ ಸೇವಾ ಟ್ರಸ್ಟ್ ನ ಅಧ್ಯಕ್ಷ ಸಚ್ಚಿದಾನಂದ ರವರು ಮಾಜಿ ಬಿಗ್ ಬಾಸ್ ಸ್ಪರ್ದಿ ಹಾಗೂ ಹಳ್ಳಿಕಾರ್ ಒಡೆಯ ಎಂದು ಹೆಸರುಗಳಿಸಿರುವ ವರ್ತೂರ್ ಸಂತೋಷ್, ಹಾಗೂ ಕನ್ನಡ ಚಲನಚಿತ್ರ ರಂಗದ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಅವರನ್ನು ಕರೆಸುತಿದ್ದು, ಜೊತೆಗೆ ಅಂತರಾಷ್ಟ್ರೀಯ ಜಾನಪದ ಕಲಾವಿದ ಅಮ್ಮ ರಾಮಚಂದ್ರ ಅವರನ್ನು ಅರಾಧನ ಮಹೋತ್ಸವ ಕ್ಕೆ ಕರೆಸುತಿದ್ದಾರೆ.
ಹಳ್ಳಿಕಾರ್ ಜೋಡೆತ್ತುಗಳ ಪ್ರದರ್ಶನ ಬಹುಮಾನ:
ಶ್ರೀ ಅಲ್ಲಹಳ್ಳಿ ಪಾರ್ವತಾಂಬೆ ಜಾನುವಾರುಗಳ ಪ್ರೀತಿಯ ದೇವರು ಎಂತಹ ರೋಗರುಜಿನೆ ಇದ್ದರೂ ಹರಕೆ ತೊಟ್ಟು ಪಂಜು ಹಚ್ಚಿದಿದರೆ ಎಲ್ಲವೂ ಗುಣವಾಗುವ ನಂಬಿಕೆ ಹಾಗಾಗಿ ಹಸಗೂಲಿ ಜಾತ್ರೆತನ್ನು ದನಗಳ ಜಾತ್ರೆ ಎಂತಲು ಕರೆಯುವ ವಾಡಿಕೆ ಈ ಹಿನ್ನಲೆಯಲ್ಲಿ ಹಳ್ಳಿಕಾರ್ ಜೋಡೆತ್ತುಗಳ ಪ್ರದರ್ಶನ ಏರ್ಪಡಿಸಿದ್ದು ಬಾಗಿಯಾಗುವ ಉತ್ತಮ ಜೋಡೆತ್ತುಗಳಿಗೆ ಪ್ರಥಮ ಬಹುಮಾನ ಇಪ್ಪತ್ತು ಸಾವಿರ, ದ್ವಿತೀಯ ಬಹುಮಾನ ಹದಿನೈದು ಸಾವಿರ, ತೃತೀಯ ಬಹುಮಾನ ಹತ್ತು ಸಾವಿರ ರೂಗಳು ನೀಡಲಾಗುವುದು ಹಾಗೂ ಭಾಗಿಯಾಗುವ ಎಲ್ಲಾ ರೈತರಿಗೂ ಸಮಾಧಾನಕರ ಬಹುಮಾನ ನೀಡಲಾಗುವುದು.
ಹಳ್ಳಿಕಾರ್ ಜೊಡೆತ್ತು ಪ್ರದರ್ಶನ ಕ್ಕೆ ಬರುವ ಆಸಕ್ತ ರೈತರು ನಂ 12 ಸುರಭಿ ಹೋಟೆಲ್ ರಸ್ತೆ , ದ,ರಾ ಬೇಂದ್ರ ನಗರ ಗುಂಡ್ಲುಪೇಟೆ ಟೌನ್, ದೂ.ಸಂ 8050833123, 7975330155 ಗೆ ಸಂಪರ್ಕಿಸುವಂತೆ ಕೋರಲಾಗಿದ್ದು ಗುಂಡ್ಲುಪೇಟೆ ತಾಲ್ಲೂಕಿನ ಹಳ್ಳಿಕಾರ್ ಜೋಡೆತ್ತುಗಳಿಗೆ ಮಾತ್ರ ಆದ್ಯತೆ.




