Mysore
26
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಹನೂರು: ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ಕೆ.ಸಿ ಮಾದೇಶ ಆಯ್ಕೆ

ಹನೂರು: ಕೊಳ್ಳೇಗಾಲ, ಯಳಂದೂರು, ಹನೂರು ಹಾಗೂ ಕೊಳ್ಳೇಗಾಲ ತಾಲ್ಲೂಕು ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಕಂಡಯ್ಯನಪಾಳ್ಯ ಕೆ.ಸಿ.ಮಾದೇಶ್ , ಕಾರ್ಯದರ್ಶಿಯಾಗಿ ನಿವೃತ್ತ ಪಿಎಸ್ಐ ಸಿದ್ದಲಿಂಗೇಗೌಡ ಅವರು ಅವಿರೋಧವಾಗಿ ಆಯ್ಕೆಯಾದರು.

ಕೊಳ್ಳೇಗಾಲ ಪಟ್ಟಣದ ಜಿ.ವಿ.ಗೌಡ ಕಾಲೇಜುನಲ್ಲಿ ಇಂದು ಒಕ್ಕಲಿಗರ ಸಂಘದ ಗೌರವಧ್ಯಕ್ಷ ಮಾಜಿ ಶಾಸಕ ಆರ್.ನರೇಂದ್ರ ರಾಜೂಗೌಡರವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಕಂಡಯ್ಯನಪಾಳ್ಯ ಕೆ.ಸಿ.ಮಾದೇಶ್, ಉಪಾಧ್ಯಕ್ಷರಾಗಿ ಬನ್ನಿಸಾರಿಗೆ ಶಂಕರ್, ಗುಂಬಳ್ಳಿ ಸೋಮೇಶ್ ಹಾಗೂ ಕಾರ್ಯದರ್ಶಿಯಾಗಿ ನಿವೃತ್ತ ಪಿಎಸ್ಐ ಸಿದ್ದಲಿಂಗೇಗೌಡ ಅವರನ್ನು ಸಂಘದ ಸದಸ್ಯರು ಒಮ್ಮತದಿಂದ ಆಯ್ಕೆ ಮಾಡಿದರು.

ಬಳಿಕ ಸಂಘದ ಗೌರವಧ್ಯಕ್ಷ ಮತ್ತು ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಇಂದು ಒಕ್ಕಲಿಗರ ಸಂಘದ ಎಲ್ಲಾ ನಿರ್ದೇಶಕರ ಒಮ್ಮತ್ತದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಸಂಘವನ್ನು ಎಲ್ಲಾರು ಸೇರಿ ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಳಿಸೋಣ ಮುಂದಿನ ದಿನಗಳಲ್ಲಿ ಬಡ ಮಕ್ಕಳು ಹಾಗೂ ನಮ್ಮ ಜನಾಂಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಹ ಕೆಲಸವನ್ನು ಮಾಡಲು ಶ್ರಮಿಸಬೇಕು ಎಂದು ತಿಳಿಸಿದರು.

ಈ ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರು ಮತ್ತು ಹಾಲಿ ನಿರ್ದೇಶಕ ರಾಜೂಗೌಡ, ನಿರ್ದೇಶಕರುಗಳಾದ ಪ್ರಸನ್ನ ಎನ್ ತೆಳ್ಳನೂರು, ಸಿಂಗನಲ್ಲೂರು ಡಿ.ಕೃಷ್ಣೇಗೌಡ, ಸಿದ್ದೇಗೌಡ, ಶ್ರೀನಿವಾಸ.ಜಿ, ಕೆ.ಭಾಸ್ಕರ, ಮಾದೇಗೌಡ(ಶೇಖರ್), ಮಂಜೇಶ್.ಎಸ್, ಆನಂದ್ ಕುಮಾರ್, ಡಿ.ಸತೀಶ್, ಮಾದೇಶ್, ಕೆ.ನಾಗರಾಜು ಅರೇಪಾಳ್ಯ, ಸುಂದ್ರಪ್ಪ, ಮನು.ಎಂ, ಜೆ.ಬಸವರಾಜು, ಮಾಜಿ ಕಾರ್ಯದರ್ಶಿ ಬಸವೇಗೌಡ, ಮಾಜಿ ನಿರ್ದೇಶಕರು ನಾಗೇಂದ್ರ, ಸುಂದರ, ಶ್ರೀನಿವಾಸ್,ಕಾಳೇಗೌಡ್ರು, ತಾಲ್ಲೂಕು ಮಾಜಿ ಅಧ್ಯಕ್ಷ ಮತ್ತು ಚಾ.ನಗರ, ಮೈಸೂರು ಜಿಲ್ಲಾ ನಿರ್ದೇಶಕರು ಎ.ಕುಮಾರ್,
ಜಿಲ್ಲಾ ನಿರ್ದೇಶಕರು ರಾಜಣ್ಣ ಪಣ್ಯದಹುಂಡಿ, ಚಾ.ನಗರ ಒಕ್ಕಲಿಗರ ಅಧ್ಯಕ್ಷ ಪುಟ್ಟಸ್ವಾಮಿ ಗೌಡ ಹಾಗೂ ಇತರರು ಇದ್ದರು.

Tags:
error: Content is protected !!