ಹನೂರು : ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಬೆಂಕಿಯನ್ನು ಯಾವ ರೀತಿ ಹತೋಟಿಗೆ ತರಬೇಕು ಎಂಬುದರ ಬಗ್ಗೆ ಗೃಹರಕ್ಷಕ ದಳದ ಸಿಬ್ಬಂದಿಗೆ ಅಗ್ನಿಶಾಮಕ ಠಾಣಾ ವತಿಯಿಂದ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ನೀಡಲಾಯಿತು.
ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಮಹೇಶ್ ಮಾತನಾಡಿ, ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದಾಗ, ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಬಳಕೆ ಮಾಡುವಾಗ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಮೊದಲು ಬೆಂಕಿ ಹರಡದಂತೆ ಹತೋಟಿಗೆ ತರಬೇಕು. ಸಾಮಾನ್ಯ ಬೆಂಕಿ ಅವಘಡಗಳು ಸಂಭವಿಸಿದಾಗ ಹಸಿರು ಸೊಪ್ಪಿನಿಂದ ಬೆಂಕಿಯನ್ನು ಹತೋಟಿಗೆ ತರಬಹುದು. ಕೆಲವೊಮ್ಮೆ ಸಿಲಿಂಡರ್‌ನಲ್ಲಿ ಬೆಂಕಿ ಹೊತ್ತಿಕೊಂಡಾಗ ಎದೆಗುಂದದೆ ಬೆಂಕಿ ಹರಡದಂತೆ ಬಕೆಟ್‌ನಿಂದ ಮುಚ್ಚಬೇಕು, ಸಾಧ್ಯವಾದರೆ ಸಂಪರ್ಕವನ್ನು ನಿಲುಗಡೆ ಮಾಡಬೇಕು ಎಂದು ತಿಳಿಸಿದರು.
ಈ ವೇಳೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಾದ ಲಿಂಗೇಶ್, ಬಸವರಾಜು, ಮನೋಹರ್, ಗೃಹರಕ್ಷಕ ಘಟಕ ಅಧಿಕಾರಿ ರಮೇಶ್, ನಾಗರಾಜು, ಸಿಬ್ಬಂದಿ ವರ್ಗದವರು ಹಾಜರಿದ್ದರು.





