ಹನೂರು: ತಾಲ್ಲೂಕಿನ ಕೌದಳ್ಳಿ-ಮಹದೇಶ್ವರಬೆಟ್ಟ ಮುಖ್ಯರಸ್ತೆ ಬದಿಯಲ್ಲಿ ತೆರಳುತ್ತಿದ್ದ ಹಸುವಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಹಸು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜರುಗಿದೆ.
ತಾಲ್ಲೂಕಿನ ಕೌದಳ್ಳಿ ಗ್ರಾಮದ ಮಾದೇಶ್ ಎಂಬವರಿಗೆ ಸೇರಿದ ಹಸು ರಸ್ತೆ ಸಮೀಪ ಸಾಗುತ್ತಿದ್ದಾಗ ಮಹದೇಶ್ವರ ಬೆಟ್ಟದತ್ತ ಹೋಗುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಸುವಿಗೆ ಗುದ್ದಿದೆ.
ಈ ವೇಳೆ ತೀವ್ರವಾಗಿ ಗಾಯಗೊಂಡ ಹಸು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಸ್ಥಳೀಯರು ಚಾಲಕನ ಬೇಜವಾಬ್ದಾರಿತನದಿಂದ ಹಸು ಮೃತಪಟ್ಟಿದೆ ಎಂದು ಆತನನ್ನು ತರಾಟೆಗೆ ತೆಗೆದುಕೊಂಡರು. ಜೀವನಕ್ಕೆ ಆಧಾರವಾಗಿದ್ದ ಹಸು ಮೃತಪಟ್ಟಿರುವುದರಿಂದ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಹಸುವಿನ ಮಾಲೀಕ ಒತ್ತಾಯಿಸಿದ್ದಾರೆ.





