ಹನೂರು: ತಾಲೂಕಿನ ಗೋಪಿನಾಥಂ ಸಮೀಪದ ಆತೂರು ಗ್ರಾಮದಲ್ಲಿ ತಂದೆಯನ್ನೆ ಸ್ವಂತ ಮಗನೇ ಹೊಡೆದು ಕಾವೇರಿ ನದಿಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮೃತನನ್ನು ಗೋಪಿನಾಥಂ ಗ್ರಾಮದ ಶಂಕರನ್ (70) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಎರಡು ದಿನಗಳ ಹಿಂದೆ ಶಂಕರನ್ ಮನೆಗೆ ಭಾರದ ಹಿನ್ನೆಲೆಯಲ್ಲಿ ಕುಟುಂಬದವರು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ನಾಪತ್ತೆ ದೂರು ಸಲ್ಲಿಸಿದ್ದರು. ಶನಿವಾರ ಕಾವೇರಿ ನದಿಯಲ್ಲಿ ಶಂಕರನ್ ಅವರ ಮೃತದೇಹ ಪತ್ತೆಯಾಗಿದ್ದು,ಮೃತನ ಪತ್ನಿ ನಂತರ ಠಾಣೆಗೆ ಆಗಮಿಸಿ ನಮ್ಮ ಮಗ ಗೊವಿಂದರಾಜು ಜೊತೆ ಮೇಕೆಗಳ ಬಾಗದ ವಿಚಾರವಾಗಿ ಆಗಾಗ್ಗೆ ಕಲಹ ನಡೆಯುತ್ತಿತ್ತು. ಕಲಹದ ವೇಳೆ ಗೊವಿಂದರಾಜು ದೊಣ್ಣೆಯಿಂದ ನನ್ನ ಗಂಡನ ತಲೆಗೆ ಹೊಡೆದು, ನಂತರ ಕಾವೇರಿ ನದಿಗೆ ತಳ್ಳಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ತಿಳಿದೊಡನೆ ಇನ್ಸ್‌ಪೆಕ್ಟರ್ ಜಗದೀಶ್ ಅವರ ನೇತೃತ್ವದಲ್ಲಿ ಪೇದೆಗಳಾದ ಶಶಿಮೂರ್ತಿ ಮತ್ತು ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





