ಮಹಾದೇಶ್ ಎಂ. ಗೌಡ, ಹನೂರು
ಹನೂರು: ಪಟ್ಟಣದ ಹೊರವಲಯದ ಚಿಂಚಳ್ಳಿ ರಸ್ತೆ ಸಮೀಪದ ಜಮೀನಿಗೆ ಕಾಡು ಪ್ರಾಣಿಗಳು ದಾಳಿ ನಡೆಸಿ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹಾಗೂ ಬಾಳೆ ಫಸಲು ನಾಶ ಮಾಡಿರುವ ಘಟನೆ ಜರುಗಿದೆ.
ಹನೂರು ಪಟ್ಟಣದ ರೈತ ಲೊಕೇಶ್ ಎಂಬುವವರು ನಾಲ್ಕು ಎಕರೆ ಜಮೀನಿನಲ್ಲಿ ಜೋಳ ಮತ್ತು ಬಾಳೆ ಬೆಳೆಗಳನ್ನು ಬೇಸಾಯ ಮಾಡಿದ್ದರು. ಆದರೆ ಸಮೀಪದ ಅರಣ್ಯ ಪ್ರದೇಶದಿಂದ ಬಂದ ಕಾಡು ಪ್ರಾಣಿಗಳು ಜಮೀನಿನಲ್ಲಿ ಬೆಳೆದ ಬಾಳೆ ಮತ್ತು ಜೋಳವನ್ನು ತಿಂದು ತುಳಿದು ಹಾಳುಮಾಡಿವೆ.
ಅಲ್ಲದೇ, ಇತ್ತೀಚೆಗೆ ಅವರು ಬಿತ್ತನೆ ಮಾಡಿದ್ದ ಜೋಳದ ಫಸಲೂ ಪೈರು ಉತ್ತಮವಾಗಿ ಬಂದಿದೆ ಎಂದು ಸಂತಸದಲ್ಲಿದ್ದರೂ ಆದರೆ ಕಾಡು ಪ್ರಾಣಿಗಳ ದಾಳಿಯಿಂದ ಆ ಫಸಲೂಕೂಡ ಹಾನಿಯಾಗಿದ್ದು, ಸಾಲ ಮಾಡಿ ಬೆಳೆದ ಬೆಳೆಗಳು ಕೆಲವೇ ದಿನಗಳಲ್ಲಿ ನಾಶವಾಗಿವೆ ಎಂದು ಅವರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಅಧಿಕಾರಿಗಳು ಶೀಘ್ರವೆ ಹಾನಿಗೊಳಗಾದ ಫಸಲಿಗೆ ಸೂಕ್ತ ಪರಿಹಾರವನ್ನು ಒದಗಿಸಲು ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ರೈತ ಲೋಕೇಶ್ ಒತ್ತಾಯಿಸಿದ್ದಾರೆ.