Mysore
34
few clouds

Social Media

ಬುಧವಾರ, 25 ಮಾರ್ಚ್ 2026
Light
Dark

ಹನೂರು | ಪಶುವೈದ್ಯಾಧಿಕಾರಿಗಳ ನಿರ್ಲಕ್ಷದಿಂದ ಸಾವಿಗೀಡಾದ 500 ನಾಟಿ ಕೋಳಿಗಳು

ಹನೂರು : ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ಮನೋಹರ್ ಎಂಬುವರಿಗೆ ಸೇರಿದ 500ಕ್ಕೂ ಹೆಚ್ಚು ನಾಟಿ ಕೋಳಿಗಳಿಗೆ ರೋಗ ತಗುಲಿ ಮೃತಪಟ್ಟಿದ್ದರು, ಸಂಬಂಧಪಟ್ಟ ಪಶು ಇಲಾಖೆಯ ವೈದ್ಯಾಧಿಕಾರಿಗಳು ರೋಗ ನಿಯಂತ್ರಣ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ರೈತ ಮುಖಂಡರು ಪಶು ಆಸ್ಪತ್ರೆಗೆ ಬೀಗ ಹಾಕಿರುವ ಘಟನೆ ಬುಧವಾರ ಬೆಳಗ್ಗೆ ಲೊಕ್ಕನಹಳ್ಳಿ ಗ್ರಾಮದಲ್ಲಿ ಜರುಗಿದೆ.

ಲೊಕ್ಕನಹಳ್ಳಿ ಗ್ರಾಮದ ಮನೋಹರ್ ಎಂಬುವವರು ಸುಮಾರು ಎಂಟು ಲಕ್ಷ ಖರ್ಚು ಮಾಡಿ ನಾಟಿ ಕೋಳಿ, ಹುಂಜಾ, ಜೂಜಾಟಕ್ಕೆ ಬಳಸುವ ಕೋಳಿಗಳನ್ನು ತಮ್ಮ ಜಮೀನಿನಲ್ಲಿ ಶೆಡ್ ನಿರ್ಮಾಣ ಮಾಡಿ ಸಾಕುತ್ತಿದ್ದರು. ಆದರೆ ಕಳೆದ ಒಂದು ವಾರದ ಹಿಂದೆ ಇದ್ದಕ್ಕಿದ್ದಂತೆ 50 ಕ್ಕೂ ಹೆಚ್ಚು ಕೋಳಿಗಳು ನಿತ್ರಾಣಗೊಂಡು ಮೃತಪಟ್ಟಿವೆ.ಈ ವೇಳೆ ಲೊಕ್ಕನಹಳ್ಳಿ ಗ್ರಾಮದಲ್ಲಿರುವ ಪಶು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲು ತೆರಳಿದ್ದಾರೆ. ಈ ವೇಳೆ ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಇರಲಿಲ್ಲ ಈ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ರೋಗ ನಿಯಂತ್ರಣ ಮಾಡುವಂತೆ ಮನವಿ ಮಾಡಿದ್ದಾರೆ.

ಆದರೂ ರೈತರ ಮನವಿಗೆ ಸ್ಪಂದಿಸದೇ ಪಶು ವೈದ್ಯಾಧಿಕಾರಿ ನಿರ್ಲಕ್ಷ್ಯ ವಹಿಸಿದ್ದರಿಂದ ಜಮೀನಿನಲ್ಲಿ ಸಾಕಿದ 500 ಕೋಟಿಗಳು ಸಹ ಮೃತಪಟ್ಟಿವೆ.ಇದೀಗ 8 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದ್ದು ಇದಕ್ಕೆ ಸರ್ಕಾರದ ವತಿಯಿಂದ ಅಗತ್ಯ ಪರಿಹಾರ ನೀಡಬೇಕು ಹಾಗೂ ರೈತರಿಗೆ ಸ್ಪಂದಿಸದ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪಶು ಆಸ್ಪತ್ರೆಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಕೆಲವು ಸಮಯದ ನಂತರ ಸಿಬ್ಬಂದಿಗಳು ಬೀಗ ತೆಗೆದು ಕರ್ತವ್ಯ ಮುಂದುವರಿಸಿದ್ದಾರೆ.

ನಂತರ ಮಾಧ್ಯಮದವರೊಂದಿಗೆ ರೈತ ಮುಖಂಡ ಪ್ರಕಾಶ್ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಸಮರ್ಪಕ ಮಳೆಯಾಗದೆ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಹೈನುಗಾರಿಕೆಗೆ ತೊಂದರೆಯಾಗಿದೆ.ಕಳೆದ ವರ್ಷ ಗೋಶಾಲೆ ತೆರೆದು ಮೇವು ಪೂರೈಕೆ ಮಾಡಿದ್ದಾರೆ. ಇವರು ನೀಡುವ ಒಣ ಮೇವನ್ನು ನಮ್ಮ ಭಾಗದ ಹಸುಗಳು ಮೇಯುವುದಿಲ್ಲ ಬದಲಾಗಿ ನಮಗೆ ಜೋಳ ನೀಡಿದರೆ ನಾವೇ ಬೆಳೆದು ನಮ್ಮ ಹಸುಗಳಿಗೆ ಮೇವು ಸಂಗ್ರಹಿಸಿಕೊಳ್ಳುತ್ತೇವೆ ಎಂದು ಹಲವಾರು ಬಾರಿ ಮನವಿ ಮಾಡಿದ್ದರು ಇದುವರೆಗೂ ಯಾವುದೇ ಪ್ರಯೋಜನವಿಲ್ಲ ಸರ್ಕಾರದಿಂದಲೇ ಕಳೆದ ಎಂಟು ತಿಂಗಳಿನಿಂದ ಜೋಳ ಬಂದಿಲ್ಲ ಎಂದು ಮಾಹಿತಿ ನೀಡುತ್ತಾರೆ. ಎಂದು ಆಕ್ರೋಶ ಹೊರಹಾಕಿದರು.

ಇನ್ನು ಲೊಕ್ಕನಹಳ್ಳಿ ವ್ಯಾಪ್ತಿಯಲ್ಲಿ ಕಾಡುಪ್ರಾಡಿಗಳ ಹಾವಳಿ ನಿರಂತರವಾಗಿ ಜರುಗುತ್ತಿದ್ದರು ಕಾಡು ಪ್ರಾಣಿಗಳನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಒಂದೆಡೆ ಕಾಡು ಪ್ರಾಣಿಗಳ ಹಾವಳಿ ಮತ್ತೊಂದೆಡೆ ರಾಸುಗಳಿಗೆ ಸಣ್ಣಪುಟ್ಟ ತೊಂದರೆಯಾದಾಗ ಪಶು ಇಲಾಖೆಯ ವೈದ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲ ಆಸ್ಪತ್ರೆಯಲ್ಲಿ ಕೆಚ್ಚಲು ಬಾವು ಔಷಧಿ ಸೇರಿದಂತೆ ಪ್ರಮುಖವಾದ ಔಷಧಿಗಳು ಸಿಗುತ್ತಿಲ್ಲ ಇದನ್ನು ನಾವು ಬೇರೆ ಕಡೆ ಖರೀದಿಸಿದರೆ 700 ರೂಪಾಯಿ ನೀಡಬೇಕು ನಾವು ಹೈನುಗಾರಿಕೆಯನ್ನೇ ನಂಬಿಕೆ ಜೀವನ ಮಾಡುತ್ತಿದ್ದೇವೆ ಆದರೆ ಸರ್ಕಾರ ಹಾಗೂ ಅಧಿಕಾರಿಗಳು ರೈತರಿಗೆ ಅನುಕೂಲ ಕಲ್ಪಿಸುತ್ತಿಲ್ಲ ಎಂದರು.

ಮನೋಹರ್ ಎಂಬುವರ ಜಮೀನಿನಲ್ಲಿ ಕೋಳಿ ಸತ್ತಿರುವ ವಿಚಾರ ನಮ್ಮ ಗಮನಕ್ಕೆ ತಂದಿಲ್ಲ, ವಿಚಾರ ತಿಳಿಯುತ್ತಿದ್ದಂತೆ ಅವರ ಜಮೀನಿಗೆ ಭೇಟಿ ನೀಡಿ ಅವರ ಜೊತೆ ಚರ್ಚಿಸಿದ್ದೇವೆ.ಈಗ ಸತ್ತಿರುವ ಕೋಳಿಗಳು ಯಾವುದು ಇಲ್ಲ ಮಾಹಿತಿ ಮೊದಲೇ ನೀಡಿದಿದ್ದರೆ ಸತ್ತ ಕೋಳಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಯಾವ ರೋಗದಿಂದ ಮೃತಪಟ್ಟಿರಬಹುದು ಎಂದು ಪತ್ತೆ ಹಚ್ಚಬಹುದಾಗಿತ್ತು. ಮುಂದೆ ಕೋಳಿಗಳು ಮೃತ ಪಡುವ ಸ್ಥಿತಿಯಲ್ಲಿದ್ದರೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಕೋಳಿಗಳಿಗೆ ರೋಗ ಕಾಣಿಸಿಕೊಂಡರೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಲೊಕ್ಕನಹಳ್ಳಿ ಪಶು ವೈದ್ಯಾಧಿಕಾರಿ ಜೋಗಪ್ಪ ಪತ್ರಿಕೆಗೆ ಮಾಹಿತಿ ನೀಡಿದರು.

Tags:
error: Content is protected !!