Mysore
16
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಗುಂಡ್ಲುಪೇಟೆ: ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು

ಗುಂಡ್ಲುಪೇಟೆ: ತಾಲೂಕಿನ ಬೇಗೂರು ಹೋಬಳಿಯ ಕೋಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 12ರಲ್ಲಿ ಕಾಂಗ್ರೆಸ್ 11 ಕ್ಷೇತ್ರ, ಬಿಜೆಪಿ 1 ಕ್ಷೇತ್ರ ಗೆಲುವು ಸಾಧಿಸಿದೆ.

ಕೊಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತರಾದ ಶೇಖರ ಪುಟ್ಟಸ್ವಾಮಿ, ಬಸಪ್ಪ ದೇವರು, ಸದಾಶಿವಪ್ಪ, ಹಿಂದುಳಿದ ವರ್ಗ (ಎ) ಕ್ಷೇತ್ರದಿಂದ ರಾಮೇಗೌಡ, ಹಿಂದುಳಿದ ವರ್ಗ (ಬಿ) ಕ್ಷೇತ್ರದಿಂದ ಜಿ. ಮಹೇಶ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ರಾಮಕೃಷ್ಣಯ್ಯ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಹೊಣಕಾರನಾಯಕ, ಮಹಿಳಾ ಮೀಸಲು ಕ್ಷೇತ್ರದಿಂದ ಎಸ್. ರತ್ನಮ್ಮ, ಶಿವಮ್ಮ ಗೆಲುವು ಸಾಧಿಸಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಎಂ. ಮಹದೇವಸ್ವಾಮಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಅಭ್ಯರ್ಥಿ ಗೆಲುವು:

ಕೋಟೆಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲಗಾರರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಭೋಗಯ್ಯನ ಹುಂಡಿಯ ಬಿಎನ್ ಗಣೇಶ್ ರವರು ಜಯಶೀಲರಾಗಿದ್ದಾರೆ.

ತಮ್ಮ ಮತ ಹಾಕದೆ ಗೆದ್ದ ಕಾಂಗ್ರೆಸ್‌ ಅಭ್ಯರ್ಥಿ:

ಶುಕ್ರವಾರ ನಡೆದ ಕೋಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸದಾಶಿವಪ್ಪ ತನ್ನ ಮತ ಹಾಕಿಕೊಳ್ಳದೆ 165 ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಈ ಸಂದರ್ಭದಲ್ಲಿ ಬೆಟ್ಟದಮಾದಹಳ್ಳಿ ಮಹದೇವಸ್ವಾಮಿ, ಎಪಿಎಂಸಿ ಆರ್.ಎಸ್.ನಾಗರಾಜು, ಸಾಹುಕಾರ್ ಬಿ.ಪಿ. ನಂದೀಶ್, ಮಲ್ಲೇಶ್, ಗೌಡಿಕೆ ಬಸವರಾಜಪ್ಪ, ಗೌಡಿಕೆ ಕೆಪಿ ಕುಮಾರ್, ಕುರುಬರಹುಂಡಿ ಕೋಟೆ ಕೆರೆಯ ರಂಗನಾಥ, ಶಂಕರನಾಯಕ, ಸಿದ್ದು ಶಿವಲಿಂಗನಾಯಕ, ಬೆಟ್ಟದಮಾದಹಳ್ಳಿ ಮಲ್ಲು ಕುರುಬರಹುಂಡಿ ಚೇರ್ಮನ್ ಮಹೇಶ್, ಶಿವಲಿಂಗಪ್ಪ ಕೆಂಚಪ್ಪ, ಚಿಕ್ಕಮಾದಪ್ಪ ಮಾದಪ್ಪ ಬೇಗೂರು ಜಗದೀಶ್ ನೂತನ ನಿರ್ದೇಶಕರು ಹಾಗೂ ಕೋಟೆಕೆರೆ, ಭೋಗಯ್ಯನಹುಂಡಿ, ಕುರುಬರಹುಂಡಿ, ಬೆಟ್ಟದಮಾದಹಳ್ಳಿ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

 

Tags:
error: Content is protected !!