ಗುಂಡ್ಲುಪೇಟೆ: ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಕಾಣಿಸಿಕೊಂಡಿ ಕಾಡುಬೆಕ್ಕನ್ನು ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಕಾಡುಬೆಕ್ಕನ್ನು ಕಂಡು ಚಿರತೆ ಮರಿ ಎಂದು ಜನರು ಗಾಬರಿಯಾಗಿದ್ದರು. ತಾಯಿ ಚಿರತೆ ಸುತ್ತಮುತ್ತ ಇರಬೇಕು ಎಂದು ಆತಂಕ್ಕೆ ಒಳಗಾಗಿದ್ದರು. ನಂತರ ಅದು ಕಾಡು ಬೆಕ್ಕು ಎಂದು ತಿಳಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಬಂದ ಓಂಕಾರ್ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡು ಬೆಕ್ಕನ್ನು ಸುರಕ್ಷಿತವಾಗಿ ಹಿಡಿದು ದೂರದ ಕಾಡಿಗೆ ಬಿಟ್ಟಿದ್ದಾರೆ.




