ಗುಂಡ್ಲುಪೇಟೆ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾರ್ವಜನಿಕರ ದಿನ ಬಳಕೆ ವಸ್ತುಗಳಾದ ಡಿಸೇಲ್, ಪೆಟ್ರೋಲ್, ಹಾಲು, ಮೊಸರು, ದಿನಸಿ ಪದಾರ್ಥಗಳು, ಬಸ್ ಟಿಕೆಟ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಕಾವಲುಪಡೆ ಸಂಘಟನೆ ಪ್ರತಿಭಟನೆ ನಡೆಸಿತು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಬಸವೇಶ್ವರ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಮಡಹಳ್ಳಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಂತರ ಪ್ರತಿಭಟನಾಕಾರರು ತಾಲ್ಲೂಕು ಕಚೇರಿಗೆ ತೆರಳಿ ತಹಸಿಲ್ದಾರ್‌ರಿಗೆ ಮನವಿ ಸಲ್ಲಿಸಿದರು.
ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷ ಎ.ಅಬ್ದುಲ್ ಮಾಲಿಕ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರ ನಿತ್ಯ ಬಳಕೆಯ ವಸ್ತುಗಳ ಮೇಲೆ ದರ ಏರಿಕೆ ಮಾಡಿರುವುದು ಸರಿಯಲ್ಲ ಎಂದರು.
ಜಿಲ್ಲಾ ಕಾರ್ಯಧ್ಯಕ್ಷರಾದ ಅಬ್ದುಲ್ ರಷೀದ್ ಹಿರಿಯ ಕನ್ನಡಪರ ಹೋರಾಟಗಾರ ಬ್ರಹ್ಮಾನಂದ್, ಗಡಿನಾಡು ವನ್ಯ ಜೀವಿ ಪರಿಸರ ಸಂರಕ್ಷಣೆ ಅಧ್ಯಕ್ಷ ಪಿ.ಬಾಲು, ಕಾರ್ಯದರ್ಶಿ ಎಸ್.ಮುಬಾರಕ್, ಉಪಾಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ರಾಮೇಗೌಡ, ಟೌನ್ ಉಪಾಧ್ಯಕ್ಷ ಸಾದಿಕ್ ಪಾಷ, ಟೌನ್ ಗೌರವಾಧ್ಯಕ್ಷ ಶಕೀಲ್, ತೆರಕಣಾಂಬಿ ಘಟಕದ ಅಧ್ಯಕ್ಷ ಮಹದೇವು, ಟೌನ್ ಯುವ ಘಟಕದ ಎ.ಅಬ್ದುಲ್ ಜಬ್ಬಾರ್, ಟೌನ್ ಸಂಚಾಲಕ ಮಿಮಿಕ್ರಿ ರಾಜು, ರವಿಕುಮಾರ್, ಮುಂಟೀಪುರ ಮಾದಯ್ಯ, ಚಿನ್ನಸ್ವಾಮಿ, ರಾಜೇಶ್, ಸಿದ್ದು, ದಾದಾಪೀರ್, ಮನೋಜ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





