ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಬಿರುಗಾಳಿ ಮಳೆಯಿಂದಾಗಿ ಆರು ಸಾವಿರಕ್ಕೂ ಹೆಚ್ಚು ಬಾಳೆಕಟ್ಟೆ ನೆಲಕಚ್ಚಿ ಅಪಾರ ಪ್ರಮಾಣದ ಬಾಳೆ ನಾಶವಾಗಿದೆ.
ಗುಂಡ್ಲುಪೇಟೆ ತಾಲ್ಲೂಕಿನಾದ್ಯಂತ ಇಂದು(ಮಾರ್ಚ್.24) ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಕಟಾವಿಗೆ ಬಂದಿದ್ದ ಬಾಳೆ ಬೆಳೆ ನೆಲಕಚ್ಚಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದ್ದು, ಲಕ್ಷಾಂತರ ರೂಪಾಯಿಯ ಮೌಲ್ಯ ನಷ್ಟ ಸಂಭವಿಸಿದೆ.
ಈ ದುರಂತ ಶಿವಪುರ ಗ್ರಾಮದ ಸಿದ್ದಪ್ಪ, ಸೋಮಪ್ಪ, ಸದಾನಂದ, ಸುರೇಶ್ ಎಂಬುವರ ಜಮೀನಿನಲ್ಲಿ 6 ಸಾವಿರಕ್ಕೂ ಅಧಿಕ ಬಾಳೆ ಬೆಳೆ ಫಸಲು ಬಿಡುವ ಹಂತದಲ್ಲಿತ್ತು. ಆದರೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಎಲ್ಲವೂ ನೆಲಕಚ್ಚಿದೆ.
ಈ ಮಳೆ ಒಂದೆಡೆ ಹರ್ಷ ತಂದರೆ ಮತ್ತೊಂದೆಡೆ ಬೆಳೆ ನಷ್ಟಕ್ಕೆ ಕಾರಣವಾಗಿದೆ. ಬೆಳೆಹಾನಿಗೆ ಒಳಗಾಗಿದ್ದ ಜಮೀನುಗಳಿಗೆ ತೋಟಗಾರಿಕೆ ಇಲಾಖೆ ಅಧಿಕಾರಿ ಲೀಲಾವತಿ ಹಾಗೂ ಗ್ರಾಮ ಆಡಳಿತಾಧಿಕಾರಿ ಅರುಣ್ ತೆರಳಿ ಪರಿಶೀಲನೆ ನಡೆಸಿದ್ದಾರೆ.





