ಚಾಮರಾಜನಗರ: ಪಂಚಾಯ್ತಿ ಅಧ್ಯಕ್ಷೆ ಪುತ್ರನೊಬ್ಬ ಆಶ್ರಯ ಯೋಜನೆಯಡಿ ಮನೆ ಕೊಡಿಸುವುದಾಗಿ ನಂಬಿಸಿ ಮಹಿಳೆಯನ್ನು ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ನಡೆದಿದೆ.
ಪೊನ್ನಾಚಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೀಲಾಂಬಿಕೆಯ ಪುತ್ರ ವೈದೇಶ್ ವಿರುದ್ಧ ಸಂತ್ರಸ್ತೆ ಮಹಿಳೆ ದೂರು ನೀಡಿದ್ದಾರೆ. ಆಶ್ರಯ ಮನೆ ಯೋಜನೆಯಡಿ ಮನೆ ಬೇಕೆಂದರೆ ತನ್ನ ಜೊತೆ ಮಲಗುವಂತೆ ಒತ್ತಾಯಿಸುತ್ತಿದ್ದನು ಎಂದು ಸಂತ್ರಸ್ತೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನನ್ನ ನಗ್ನ ಫೋಟೊಗಳನ್ನು ಚಿತ್ರೀಸಿಕೊಂಡು ತನ್ನ ಜೊತೆ ಮಲಗದಿದ್ದರೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ನಿರಂತರವಾಗಿ ಅತ್ಯಚಾರ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇದೀಗ ತನ್ನ ಖಾಸಗಿ ವೀಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಮಾಡಲಾಗಿದೆ. ಇದರಿಂದ ಮನನೊಂದ ಮಹಿಳೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಮೇರೆಗೆ ವೈದೇಶ್ ಹಾಗೂ ವೀಡಿಯೋ ವೈರಲ್ ಮಾಡಿದ ಬಸಮಣಿ, ಶಿವಮ್ಮ ಎಂಬುವರ ವಿರುದ್ಧ ಐಪಿಸಿ ಸೆಕ್ಷನ್ 376,384,417,507 ಮತ್ತು ಐಟಿ ಕಾಯ್ದೆ 66(ಇ), 67,67(ಎ) ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ.