Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಮತ್ತೊಂದು ಗುಡ್‌ ನ್ಯೂಸ್‌

ಹನೂರು: ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಪ್ರವಾಸಿಗರಿಗೆ ಹಾಗೂ ಯಾತ್ರಾರ್ಥಿಗಳಿಗೆ ಪರಿಸರ, ವನ್ಯಜೀವಿ ಸಂರಕ್ಷಣೆ ಹಾಗೂ ವನ್ಯ ಪ್ರಾಣಿಗಳ ವೀಕ್ಷಣೆಗಾಗಿ ಉಡುತೊರೆ ಹಳ್ಳ ಜಲಾಶಯ ಕಡೆಯಿಂದ ವನ್ಯಜೀವಿ ಸಪ್ತಾಹ ಪ್ರಯುಕ್ತ ಅಕ್ಟೋಬರ್ 2ರಿಂದ ಸಫಾರಿ ಪ್ರಾರಂಭ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿ ಪ್ರಿಯರು ಸದ್ಬಳಕೆ ಮಾಡಿಕೊಳ್ಳುವಂತೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಡಾ.ಸಂತೋಷ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಪಿ ಜಿ ಪಾಳ್ಯ ಸಫಾರಿಯನ್ನು ಲೊಕ್ಕನಹಳ್ಳಿ ಕಳೆದ ಡಿಸೆಂಬರ್ ೨ ರಂದು ಪ್ರಾರಂಭ ಮಾಡಲಾಗಿತ್ತು. ಸಫಾರಿ ಕೇಂದ್ರಕ್ಕೆ ಬರುವ ವನ್ಯಜೀವಿ ಪ್ರಿಯರನ್ನು 18 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಿ ವಾಪಸ್ ಬರಲಾಗುತ್ತಿದೆ. ಸಫಾರಿ ಕೇಂದ್ರಕ್ಕೆ ಬಂದಂತಹ ಪ್ರವಾಸಿಗರಿಗೆ ಆನೆ, ಹುಲಿ, ಚಿರತೆ, ಜಿಂಕೆ, ಕಡವೆ, ಕಾಡೆಮ್ಮೆ, ಕರಡಿ, ತೋಳ, ನರಿ ಸೇರಿದಂತೆ ಇನ್ನಿತರ ಪ್ರಾಣಿಗಳು ಕಂಡು ಬಂದಿದೆ. ಇದುವರೆಗೂ ಸುಮಾರು 3 ಸಾವಿರಕ್ಕೂ ಹೆಚ್ಚು ಪ್ರವಾಸಿಗರು, ೪೦೦ಕ್ಕೂ ಎಷ್ಟು ಶಾಲಾ ವಿದ್ಯಾರ್ಥಿಗಳು ಭೇಟಿ ನೀಡಿ ಪ್ರಕೃತಿಯನ್ನು ಆನಂದಿಸಿ ಉತ್ತಮ ಸ್ಪಂದನೆ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಪ್ರವಾಸಿಗರಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕುಡುಕರೆ ಜಲಾಶಯದ ಅರಣ್ಯ ಪ್ರದೇಶದ ಕಡೆಯಿಂದ ಪಿಜಿ ಪಾಳ್ಯ ವನ್ಯಜೀವಿ ವಲಯ ಲೋಕನಹಳ್ಳಿಯವರೆಗೆ ಸಫಾರಿಯನ್ನು ಕೈಗೊಳ್ಳಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರನ್ನು ಅನುಮತಿ ಕೋರಲಾಗಿತ್ತು. ಪಿ ಜಿ ಪಾಳ್ಯ ವನ್ಯಜೀವಿ ವಲಯದಲ್ಲಿ ಸಫಾರಿಯು ಯಶಸ್ವಿಯಾಗಿರುವುದರಿಂದ ಉಡುತೊರೆ ಹಳ್ಳ ಜಲಾಶಯದ ಅರಣ್ಯ ಪ್ರದೇಶದ ಸಫಾರಿಗೆ ಅನುಮತಿಯನ್ನು ನೀಡಲಾಗಿದೆ.

ಈ ನಿಟ್ಟಿನಲ್ಲಿ ಅಕ್ಟೋಬರ್.2ರಿಂದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಾವೇರಿ ನೀರಾವರಿ ನಿಗಮ ನಿಯಮಿತ, ಕಬಿನಿ ವಿಭಾಗ ನಂ 4ರವರ ಕಚೇರಿ ಮುಂಭಾಗ ಅಜ್ಜೀಪುರ ಗ್ರಾಮದಿಂದ ಪ್ರಾರಂಭವಾಗಲಿದೆ.

ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಹಾಗೂ ಸಂಜೆ ಮೂರು ರಿಂದ ಆರು ಗಂಟೆಯವರೆಗೆ ಸಫಾರಿ ಇರಲಿದ್ದು ಸಫಾರಿ ಶುಲ್ಕ ವಯಸ್ಕರಿಗೆ 400 ಮಕ್ಕಳಿಗೆ ಇನ್ನೂರು ರೂಪಾಯಿ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9481995505,9481995515,9481995536 ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಲಾಗಿದೆ. ಇ ಮೇಲ್ ವಿಳಾಸ rfohanur123@gmail.com ಸಂಪರ್ಕ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Tags: