Mysore
14
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಜೂಜಾಟ : ಆರೋಪಿಗಳ ಬಂಧನ, ನಗದು ವಶ

ಚಾಮರಾಜನಗರ: ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಸರಹದ್ದಿನ ಕುಂತೂರು ಗ್ರಾಮದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 8 ಮಂದಿಯನ್ನು ಬಂಧಿಸಿ ಸ್ಥಳದಲ್ಲಿದ್ದ 8,750 ರೂ. ಗಳನ್ನು ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಅಕ್ರಮ ಮದ್ಯ ಸಾಗಾಣಿಕೆ : ಪ್ರಕರಣ ದಾಖಲು
ಚಾಮರಾಜನಗರ: ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ಹೋಬಳಿ ಕೇಂದ್ರದ ಸಂತೇಮರಹಳ್ಳಿ- ಚಾಮರಾಜನಗರ ರಸ್ತೆಯ ಶ್ರೀ ರೇವಮ್ಮ ಪುಟ್ಟಬಸಪ್ಪ ಕಲ್ಯಾಣ ಮಂಟಪದ ಬಳಿ ಆಗಸ್ಟ್ 30ರಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 2518 ರೂಪಾಯಿ ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿದ್ದ ಬಿ ಲಿಂಗರಾಜುನಾಯಕ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಸಂತೇಮರಹಳ್ಳಿ ಗ್ರಾಮದ ಶ್ರೀ ರಘವೇಂದ್ರ ವೈನ್ಸ್ ಸ್ಟೋರ್ ಕ್ಯಾಷಿಯರ್ ರಘು ಹಾಗೂ ಬಿ. ಲಿಂಗರಾಜುನಾಯಕ ಅವರ ವಿರುದ್ದ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Tags:
error: Content is protected !!