ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಆನೆಯೊಂದು ಲಾರಿಯನ್ನೇ ಅಡ್ಡಹಾಕಿದ ಘಟನೆ ನಡೆದಿದೆ.
ಬಂಡೀಪುರ-ಊಟಿ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಒಂಟಿಸಲಗವೊಂದು ತರಕಾರಿ, ಕಬ್ಬು ಹಾಗೂ ಬಾಳೆ ಸಾಗಿಸುವ ಲಾರಿಗಳಿಗೆ ಕಾಟ ಕೊಡುತ್ತಲೇ ಇರುತ್ತದೆ. ಕಾಡಾನೆ ಹಾವಳಿಯಿಂದ ವಾಹನ ಸವಾರರು, ಲಾರಿ ಚಾಲಕರು ಕಂಗಾಲಾಗಿದ್ದಾರೆ.
ಇದನ್ನು ಓದಿ:ಗುಂಡ್ಲುಪೇಟೆ | ಪಟ್ಟಣದಲ್ಲಿ ಕಾಣಿಸಿಕೊಂಡ ಚಿರತೆ : ಸಾರ್ವಜನಿಕರಲ್ಲಿ ಆತಂಕ
ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಓಡಿಸಲು ಮುಂದಾದರೂ, ಪಟಾಕಿ ಸಿಡಿಸಿ ಹೆದರಿಸಲು ಮುಂದಾದರೂ ಕ್ಯಾರೇ ಎನ್ನದ ಈ ಆನೆ, ಲಾರಿಗಳು ಬಂದರೆ ಸಾಕು ರಸ್ತೆ ಮಧ್ಯೆ ಅಡ್ಡ ಹಾಕಿ ನಿಲ್ಲಲಿದೆ.
ಕಾಡಾನೆ ಕಿರಿಕ್ ಮಾಡುವ ದೃಶ್ಯ ವಾಹನ ಸವಾರರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.





