ಮೈಸೂರು: ಚಾಮರಾಜಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಈ ಕ್ಷೇತ್ರ ಗೆಲ್ಲಲ್ಲು ಸಚಿವ ಮಹದೇವಪ್ಪನಂತಹ ದೊಡ್ಡ ನಾಯಕರ ಅವಶ್ಯಕತೆಯಿಲ್ಲ. ಸಣ್ಣ ನಾಯಕರನ್ನು ನಿಲ್ಲಿಸಿದರೂ ಗೆಲುವು ಸಾಧಿಸುತ್ತಾರೆ ಎಂದು ಚಾಮರಾಜನಗರ ಲೋಕಸಭಾ ಟಿಕೆಟ್ ಆಕಾಂಕ್ಷಿ ಜಿ.ಎನ್ ನಂಜುಂಡಸ್ವಾಮಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಸಚಿವರನ್ನು ಲೋಕ ಕಣಕ್ಕೆ ಇಳಿಯುವಂತೆ ಸೂಚಿಸಿಲ್ಲ. ಹಾಗಾಗಿ ಈ ಕ್ಷೇತ್ರಕ್ಕೆ ಮಹದೇವಪ್ಪರಂತಹ ದೊಡ್ಡ ನಾಯಕರ ಅಗತ್ಯವಿಲ್ಲ. ಈ ಕ್ಷೇತ್ರದಲ್ಲಿ ಸಾಮಾನ್ಯ ನಾಯಕರ ಅಥವಾ ಕಾರ್ಯಕರ್ತರನ್ನು ನಿಲ್ಲಿಸಿದರು ಗೆಲುವು ಸಾಧಿಸುತ್ತಾರೆ.
ಮಹದೇವಪ್ಪ ಅವರ ಮಗ ಸುನೀಲ್ ಬೋಸ್ ಅವರಿಗೆ ಟಿಕೆಟ್ ಕೇಳಿರುವುದು ಸಹಜ. ನಾನು ಸಹಾ ಈ ಕ್ಷೇತ್ರದ ಆಕಾಂಕ್ಷಿಯಾಗಿದ್ದೇನೆ. ಆದರೆ ಚಾಮರಾಜನಗರ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿಯೂ ಅಂತಿಮವಾಗಿಲ್ಲ. ಇನ್ನೆರೆಡು ಮೂರು ದಿನಗಳಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮವಾಗಲಿದೆ ಎಂದು ಇದೇ ವೇಳೆ ಜಿ.ಎನ್ ನಂಜುಂಡಸ್ವಾಮಿ ಹೇಳಿದರು.





