Mysore
22
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

ರೈತರ ಮನವಿ ಪತ್ರಗಳನ್ನ ಕಸದ ಬುಟ್ಟಿಗೆ ಎಸೆದಿರುವುದಕ್ಕೆ ಖಂಡನೆ ; ಅನ್ನದಾತರಿಂದ ಪ್ರೊಟೆಸ್ಟ್

ಚಾಮರಾಜನಗರ : ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರೈತರು ಹಾಗೂ ಸಾರ್ವಜನಿಕರು ನೀಡಿದ ಮನವಿ ಪತ್ರಗಳನ್ನ ಕಸದ ಬುಟ್ಟಿಗೆ ಎಸೆದಿರುವುದನ್ನ ಖಂಡಿಸಿ ಗುಂಡ್ಲುಪೇಟೆಯಲ್ಲಿ ಸಾಮೂಹಿಕ ನಾಯಕತ್ವದ ರೈತ ಸಂಘದ ವತಿಯಿಂದ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

ಸಂಘಟನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ರೈತರು ಹೆದ್ದಾರಿ ಮೂಲಕ ಸಾಗಿ KSRTC ಬಸ್‌ ನಿಲ್ದಾಣದ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ  ಸಮಸ್ಯೆಗಳ ಕುರಿತು ರೈತರು ನೀಡಿದ್ದ ಮನವಿ ಪತ್ರಗಳನ್ನ ಕಸದ ಬುಟ್ಟಿಗೆ ಹಾಕುವ ಮೂಲಕ  ಸಿದ್ದರಾಮಯ್ಯ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಇದು ರಾಜ್ಯ ಎಲ್ಲಾ ರೈತರಿಗೆ ಮಾಡಿದ ಅವಮಾನ. ಆದ್ದರಿಂದ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:
error: Content is protected !!