ಗುಂಡ್ಲಪೇಟೆ : ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಾರ್ವಜನಿಕ ವಾಹನಗಳಿಗೆ ನಿಷೇಧವಿದ್ದರೂ ಕೇರಳ ರಾಜ್ಯದ ಖಾಸಗಿ ವಾಹನಗಳು ನೂರಾರು ಮಂದಿಯನ್ನು ಕರೆದೊಯ್ದು ಚಲನಚಿತ್ರ ಚಿತ್ರೀಕರಣಕ್ಕೆ ಅವಕಾಶ ನೀಡಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಪೊಲೀಸರಿಂದ ಸೂಕ್ತ ಅನುಮತಿ ಅಥವಾ ಭದ್ರತೆ ಪಡೆಯದೆ ಮಲಯಾಳಂ ಚಿತ್ರತಂಡವು ಚಿತ್ರೀಕರಣ ಪ್ರಾರಂಭಿಸಿತು. ಬೆಟ್ಟಕ್ಕೆ ತೆರಳ ಬೇಕಾದರೆ ಸರ್ಕಾರಿ ಬಸ್ ಅಥವಾ ಅರಣ್ಯ ಇಲಾಖೆಯ ಜೀಪ್‌ನಲ್ಲಿಯೇ ಹೋಗಬೇಕು. ಸ್ಥಳೀಯರಿಗೂ ಕೂಡ ಖಾಸಗಿ ವಾಹನದಲ್ಲಿ ಬೆಟ್ಟಕ್ಕೆ ತೆರಳಲು ಅವಕಾಶವಿಲ್ಲ. ಆದರೆ ಕೇರಳ ಚಲನಚಿತ್ರ ಚಿತ್ರೀಕರಣಕ್ಕೆ ಬೆಟ್ಟಕ್ಕೆ ಹೋಗಲು ಅವಕಾಶ ನೀಡಿ, ಮೂರು ಬಸ್‌ಗಳ ತಂಡವು ಬೆಟ್ಟದ ತುದಿ ತಲುಪಿರುವುದಕ್ಕೆ ರೈತ ಮುಖಂಡರು ಹಾಗೂ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿ, ಅರಣ್ಯ ಇಲಾಖೆ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು.





