ಹನೂರು : ಕಿಶೋರಿಯರು ತಾವು ಇಲ್ಲಿ ಕಲಿತಿರುವ ಹೊಲಿಗೆ ತರಬೇತಿಯನ್ನು ಮುಂದುವರೆಸುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಆಗಿದ್ದಾಗ ಮಾತ್ರ ಇಂತಹ ತರಬೇತಿಗಳಿಗೆ ಅರ್ಥ ಸಿಗುತ್ತದೆ ಎಂದು ಫಾ. ರೋಷನ್ ಬಾಬು ಹೇಳಿದರು.
ಪಟ್ಟಣದ ಹೋಲಿಕ್ರಾಸ್ ಸಂಸ್ಥೆಯ ಸಭಾಂಗಣದಲ್ಲಿ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು..
ಈ ಸಮಾಜದಲ್ಲಿ ಹೆಣ್ಣು ಆರ್ಥಿಕವಾಗಿ ಮುಂದೆ ಬರಬೇಕು, ಅಡುಗೆ ಕೋಣೆ ಬಿಟ್ಟು ಹೊರಗಡೆ ಬರಬೇಕು ಅಲ್ಲದೆ ಸಂಸ್ಥೆಯಲ್ಲಿ ಕಳಿಸಿರುವ ಜೀವನ ಕೌಶಲ್ಯ ಹಾಗೂ ನಡತೆಯನ್ನು ನಿಮ್ಮ ಜೀವನದಲ್ಲಿ ರೂಪಿಸಿಕೊಳ್ಳಿ ಬದುಕು ಹಸನಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಬಸವಣ್ಣ ಮಾತನಾಡಿ ಮಹಿಳೆಯರಿಗೆ, ಕಿಶೋರಿಯರಿಗೆ ಕೇವಲ ಮೀನು ತಿನ್ನುವುದನ್ನು ಹೇಳಿಕೊಟ್ಟರೆ ಸಾಲದು ಮೀನು ಹಿಡಿಯುವ ಕಲೆಯನ್ನು ಹೇಳಿಕೊಟ್ಟಿದ್ದಾರೆ.ಅವರಿಗೆ ಯಾವಾಗ ಮೀನು ತಿನ್ನಬೇಕು ಆವಾಗ ಅವರೇ ಮೀನು ಹಿಡಿದು ತಿನ್ನಲಿ ಸ್ವಾವಲಂಬಿಯಾಗಿ ಬದುಕಲು ಸಹಾಯವಾಗುತ್ತದೆ ಅಲ್ಲದೆ ಸಂಸ್ಥೆಯೂ ಸಾಕಷ್ಟು ವಿಚಾರಗಳನ್ನು ಜೀವನ ಕೌಶಲ್ಯಗಳನ್ನು ತಮಗೆ ಹೇಳಿಕೊಟ್ಟಿದೆ. ಗ್ರಾಮೀಣ ಭಾಗದ ನಮ್ಮ ಮಕ್ಕಳನ್ನು ಹುಡುಕಿ ತರಬೇತಿ ಕೊಟ್ಟಿರುವುದು ಶ್ಲಾಘನೀಯ ಎಂದರು.
ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಯರಂಬಾಡಿ ಶಿವಣ್ಣ, ಹೋಲಿಕ್ರಾಸ್ ಸಂಸ್ಥೆಯ ಯೋಜನಾಧಿಕಾರಿ ಸಿಸ್ಟರ್ ಆನಿಸ್, ಹಾಗೂ ಸಿಸ್ಟರ್ ಗ್ರಾಸಿಯ, ಸದ್ವಿದ್ಯಾ ರೂರಲ್ ಕಮ್ಯೂನಿಟಿ ಕಾಲೇಜಿನ ಪ್ರಿನ್ಸಿಪಲ್ ಸಿಸ್ಟರ್ ರೆಜಿಜಾನ್,ಸಿಸ್ಟರ್ ಆನಂದ, ಸಿಸ್ಟರ್ ತೆರೇಸಾ, ಸಿಸ್ಟರ್ ಜೋಸ್ಮಿನ್, ಹೋಲಿಕ್ರಾಸ್ ಸಂಸ್ಥೆಯ ಸಿಬ್ಬಂದಿಗಳು, ಪೋಷಕರು, ಮಕ್ಕಳು ಭಾಗವಹಿಸಿದ್ದರು.





