Mysore
17
scattered clouds

Social Media

ಭಾನುವಾರ, 14 ಡಿಸೆಂಬರ್ 2025
Light
Dark

20 ವರ್ಷಗಳ ರಾಜಕೀಯ ವನವಾಸ ಅಂತ್ಯಗೊಂಡಿದೆ: ಎಸ್‌. ಬಾಲರಾಜು

ಮೈಸೂರು: ಇಪ್ಪತ್ತು ವರ್ಷಗಳ ರಾಜಕೀಯ ವನವಾಸದ ಅಂತ್ಯಗೊಂಡು ನನಗೊಂದು ಅವಕಾಶ ಸಿಕ್ಕಿದೆ. ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆದ್ದು ಬರುವ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಬಾಲರಾಜು ಹೇಳಿದರು.

ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಾಲರಾಜು, 2004 ರಲ್ಲಿ ಪಕ್ಷೇತರ ಅಭ್ಯರ್ಥಿ ಸ್ಪರ್ಧೆ ಮಾಡಿ ಶಾಸಕನಾಗಿದ್ದೆ. ನನ್ನ ರಾಜಕೀಯ ಜೀವನದ 31 ವರ್ಷಗಳ ಅನುಭವದಲ್ಲಿ ಕೇವಲ ಮೂರು ವರ್ಷಗಳು ಮಾತ್ರ ಅಧಿಕಾರ ಅನುಭವಿಸಿದ್ದು. ಅದಾದ ನಂತರ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಹಲವು ಪಕ್ಷಕ್ಕೆ ಹೋಗಿ ಬಂದಾಯ್ತು. 20 ವರ್ಷಗಳ ಬಳಿಕ ನನಗೆ ಒಂದು ಅವಕಾಶ ಸಿಕ್ಕಿದೆ ಎಂದರು.

ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ. ಹಾಲಿ ಶಾಸಕರಾದ ಶ್ರೀನಿವಾಸ್ ಪ್ರಸಾದ್ ನನಗೆ ಆಶೀರ್ವಾದ ಮಾಡಿದ್ದಾರೆ. ಅವರ ಆಶೀರ್ವಾದ ನನ್ನ ಮೇಲೆ ಇರುತ್ತೆ ಎಂಬ ವಿಶ್ವಾಸವಿದೆ ಎಂದರು.

ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲದಿದ್ದರೂ ಬಿಜೆಪಿಗೆ ತನ್ನದೇ ಆದ ಹಿಡಿತ ಮತ್ತು ಸಾಂಪ್ರದಾಯಿಕ ಮತಗಳಿವೆ. ಜೊತೆಗೆ ಧ್ರುವನಾರಾಯಣ್ ಬೆಂಬಲಿಗರು, ಶ್ರೀನಿವಾಸ್ ಪ್ರಸಾದ್ ಬೆಂಬಲಿಗರು ಎಲ್ಲರು ಈ ಚುನಾವಣೆಯಲ್ಲಿ ನನಗೆ ಬೆಂಬಲ ನೀಡುವ ಭರವಸೆಯಿದೆ. ಪಕ್ಷ ನನ್ನನ್ನ‌ ಗುರುತಿಸಿ ಟಿಕೆಟ್ ಕೊಟ್ಟಿದೆ ಟಿಕೆಟ್ ಸಿಗಲು ಇಂತಹವರೇ ಸಹಕಾರ ಹೆಚ್ಚು ಅಂತ ನಾನು ಹೇಳಲಾರೆ ಆದರೆ ಈ ಬಾರಿ ಗೆಲ್ಲುವ ವಿಶ್ವಾಸವಿದೆ ಎಂದು ಎಸ್‌. ಬಾಲರಾಜು ಹೇಳಿದರು.

Tags:
error: Content is protected !!