ಮೈಸೂರು : ಜನಪರ ರಾಜಕಾರಣದ ಮಾದರಿ ನಾಯಕ, ಮಾಜಿ ಸಂಸದ, ಕರ್ನಾಟಕ ಪ್ರದೇಶ ಕಾಂಗ್ರೇಸ್ ನ ಕಾರ್ಯಾದ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಆರ್.ಧ್ರುವನಾರಾಯಣ ಹಾಗೂ ಅವರ ಪತ್ನಿ ವೀಣಾರಿಗೆ ಹುಟ್ಟೂರು ಹೆಗ್ಗವಾಡಿಯಲ್ಲಿಂದು ಬಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾತು.
ಮಂಗಳವಾರ ಬೆಳಗ್ಗೆ ಹೆಗ್ಗವಾಡಿಯ ತೊಟದಲ್ಲಿರುವ ತಂದೆ ಧ್ರುವನಾರಾಯಣ ಹಾಗೂ ತಾಯಿ ವೀಣಾ ದಂಪತಿಗಳ ಸಮಾಧಿಗೆ ಧ್ರುವ ಬೆಂಬಲಿಗರೂ, ಅಭಿಮಾನಿಗಳ ಜೊತೆ ಆಗಮಿಸಿದ ಪುತ್ರರಾದ ಶಾಸಕ ದರ್ಶನ್ ದ್ರುವನಾರಾಯಣ ಹಾಗೂ ಧೀರೇನ್ ಧ್ರುವನಾರಾಯಣ ಕಂಬಿನಿ ತಂಬಿಕೊಂಡು ತಂದೆ ತಾಯಿಗಳಿಗೆ ಭಾವಪೂರ್ಣ ಶ್ರದ್ದಾಂಜಲಿ ಸಮರ್ಪಿಸಿದರು.
ಈ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ನಾಯಕ ವಿನಯಕುಮಾರ ಸೊರಕೆ, ಗುಂಡ್ಲುಪೇಟೆ ಶಾಸಕ ಗಣೇಶ ಪ್ರಸಾದ, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಹುಣಸೂರಿನ ಮಂಜುನಾಥ, ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾದ್ಯಕ್ಷೆ ಪುಷ್ಪಾ ಅಮರನಾಥ್, ಕೆ ಪಿ ಸಿ ಸಿ ಕಾರ್ಯದರ್ಶಿಗಳಾದ ಕಾವೇರಪ್ಪ, ಶ್ರೀಕಂಠು, ಎಸ್ ಸಿ ಬಸವರಾಜು, ಹೀರೇಹಳ್ಳಿ ಸೋಮೇಶ, ರವಿ ಕುಮಾರ್, ಕಾಡಾ ಅದ್ಯಕ್ಷ ಮರಿಸ್ವಾಮಿ, ತಗಡೂರು ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಹಾಡ್ಯ ರಂಗಸ್ವಾಮಿ, ಹುಲ್ಲಹಳ್ಳಿಯ ಶ್ರೀಕಂಠ ನಾಯಕ, ಸಿ ಎಂ ಶಂಕರ್, ಗ್ಯಾರಂಟಿ ಸಮಿತಿಯ ಜಿಲ್ಲಾದ್ಯಕ್ಷ ಮಾರುತಿ, ರಾಜ್ಯ ವಿಶ್ವಕರ್ಮ ನಿಗಮದ ಮಾಜಿ ಅದ್ಯಕ್ಷ ನಂದಕುಮಾರ್, ಉಪ್ಪಾರ ನಿಗಮದ ಮಾಜಿ ಅದ್ಯಕ್ಷ ಶಿವಕುಮಾರ್, ಜಿ . ಪಂ ಮಾಜಿ ಸದಸ್ಯರಾದ ಲತಾ ಸಿಧ್ದಶೆಟ್ಟಿ ಯೋಗೀಶ, ಕಬ್ಬಳ್ಳಿ ಮಹೇಶ, ಸದಾಶಿವಮೂರ್ತಿ ನಂಜನಗೂಡು ನಗರಸಭಾ ಅದ್ಯಕ್ಷ ಶ್ರೀಕಂಠ, ಉಪಾದ್ಯಕ್ಷೆ ರೆಹನಾ ಭಾನು, ದೊರೆಸ್ವಾಮಿ ನಾಯಕ, ನಾಗರಾಜು , ರಾಜು ಶ್ರೀನಿವಾಸಮೂರ್ತಿ, ವಿಜಯ ಕುಮಾರ್ ಕಾಗಲವಾಡಿ ಮಾದಪ್ಪ ರವಿಕುಮಾರ್. ನಗರಸಭಾ ಸದಸ್ಯರುಗಳಾದ ಪ್ರದೀಪ್ , ಮಹೇಶ, ಗಂಗಾಧರ್ ಸೇರಿದಂತೆ ಹಲವಾರು ಸದಸ್ಯರುಗಳು ಕಾಂಗ್ರೇಸ್ ಮುಖಂಡರು, ದ್ರುವನಾರಾಯಣರ ಅಭಿಮಾನಿಗಳು ಉಪಸ್ಥಿತರಿದ್ದರು.





