ಹನೂರು: ಬಿಸಿಲಿನ ತಾಪದಿಂದ ಬಸವಳಿದ ಕಾಡಾನೆಗಳ ಹಿಂಡು ತುಂಬಿದ ಕೆರೆಯಲ್ಲಿ ಜಲಕ್ರೀಡೆಯಲ್ಲಿ ತೊಡಗಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹನೂರು ತಾಲ್ಲೂಕಿನ ಗಡಿಹಂಚಿನಲ್ಲಿರುವ ಪಾಲಾರ್ ಸಮೀಪದ ಕೆರೆಯಲ್ಲಿ ಎಂಟು ಆನೆಗಳ ಹಿಂಡು ನೀರಿನಲ್ಲಿ ಇಳಿದು, ದಾಹ ತೀರಿಸಿಕೊಳ್ಳುವುದರ ಜೊತೆಗೆ
ಬೇಸಿಗೆಯ ತಾಪದ ಹಿನ್ನೆಲೆಯಲ್ಲಿ ಜಲಕ್ರೀಡೆಯಲ್ಲಿ ತೊಡಗಿದ್ದವು.
ಈ ದೃಶ್ಯವನ್ನು ಸ್ಥಳೀಯ ವಾಹನ ಸವಾರರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದಾರೆ.





