Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಚಾಮರಾಜನಗರದಲ್ಲಿ ಶಿಥಿಲಗೊಂಡಿರುವ ವಿದ್ಯುತ್‌ ಕಂಬ: ಜನ-ಜಾನುವಾರುಗಳಿಗೆ ಭಾರೀ ಕಂಟಕ

ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಚಂದಕವಾಡಿ ಹೋಬಳಿಯ ಅಟ್ಟುಗುಳಿಪುರ ಬಳಿ ವಿದ್ಯುತ್‌ ಲೈನ್‌ ಎಳೆಯಲಾಗಿದ್ದು, ಶಿಥಿಲಗೊಂಡಿರುವ ವಿದ್ಯುತ್‌ ಕಂಬ ಭಾರೀ ಅಪಾಯವನ್ನೇ ಆಹ್ವಾನಿಸುತ್ತಿದೆ.

ಈ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಜಮೀನು ಮಾಲೀಕರು ಚೆಸ್ಕಾಂಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಮೀನಿನಲ್ಲಿ ವ್ಯವಸಾಯ ಮಾಡುವ ವೇಳೆ ಏನಾದರೂ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ. ಆದ್ದರಿಂದ ವ್ಯವಸಾಯ ಮಾಡುವುದನ್ನೇ ನಿಲ್ಲಿಸಲಾಗಿದೆ. ಈ ಕಂಬ ಅಕಸ್ಮಾತ್‌ ಬಿದ್ದು ಹೋದರೆ 25-30 ಎಕರೆ ಜಮೀನುಗಳಲ್ಲಿ ವ್ಯವಸಾಯ ಮಾಡುವವರಿಗೆ ತೊಂದರೆಯಾಗುತ್ತದೆ.

ಇನ್ನೂ ಶಿಥಿಲಗೊಂಡಿರುವ ವಿದ್ಯುತ್ ಕಂಬದಿಂದ ಅಪಾಯ ಉಂಟಾಗುವ ಸಾಧ್ಯತೆಗಳಿರುವುದರಿಂದ ಈ ಭಾಗದ ರೈತರು ಹಲವು ಎಕರೆ ಜಮೀನಿನ್ನು ಪಾಳು ಬೀಳಿಸಿದ್ದಾರೆ. ಇದಲ್ಲದೇ ಇದರ ಸನಿಹದಲ್ಲೇ ಆನೆ ಕಾರಿಡಾರ್‌ ಇದ್ದು, ಸುವರ್ಣಾವತಿ ಜಲಾಶಯದ ಹಿನ್ನೀರಿಗೆ ಬರುವ ಆನೆಗಳು ಸ್ವಲ್ಪ ಒತ್ತರಿಸಿದರೂ ಸಾಕು ಅವುಗಳ ಮೇಲೆಯೇ ವಿದ್ಯುತ್‌ ವೈರ್‌ಗಳು ಬಿದ್ದು, ಆನೆಗಳು ಬಲಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಸ್ಥಳದಲ್ಲಿ ಏನಾದರೂ ಪ್ರಾಣ ಹಾನಿಯಾದರೆ ಅದಕ್ಕೆ ಚೆಸ್ಕಾಂನವರೇ ನೇರ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags: