Mysore
20
clear sky

Social Media

ಗುರುವಾರ, 29 ಜನವರಿ 2026
Light
Dark

ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ : ಗಡಿ ಜಿಲ್ಲೆಯಲ್ಲಿ ಅಮಾನವೀಯ ಘಟನೆ

ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಹನೂರು ತಾಲೂಕಿನ ಅಜ್ಜಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿ.ಆರ್.ನಗರ ಗ್ರಾಮದಲ್ಲಿ ನಡೆದಿದೆ.

ಕಣ್ಣಮ್ಮ ಎಂಬಾಕೆ ಹಲ್ಲೆಗೊಳಗಾದ ವೃದ್ಧೆಯಾಗಿದ್ದು ಅಂಗ ಮುತ್ತು ಈತನ ಮಗಳು ಸೆಲ್ವಿ ಹಾಗೂ ಸಂಬಂಧಿ ಮಹಿಳೆ ಮಂಜು ಎಂಬವರು ಬಂಧಿತರು.

ಕಣ್ಣಮ್ಮ ತಮ್ಮ ಜಮೀನಿನಲ್ಲಿ ಹುರುಳಿ ಬೆಳೆಯನ್ನು ಬೆಳೆದಿದ್ದರು. ಇದನ್ನು ಪಕ್ಕದ ಜಮೀನಿನ ಪಳನಿಸ್ವಾಮಿ ಎಂಬವರು ಹಸು ಬಿಟ್ಟು ಮೇಯಿಸಿದ್ದರು. ಇದನ್ನು ಪ್ರಶ್ನಿಸಿದಕ್ಕೆ ಯಾರು ಮೇಯಿಸಿದ್ದಾರೆ ಎಂದು ಗೊತ್ತಿಲ್ಲ ಎಂದು ತಿಳಿಸಿದ್ದರು. ಜಮೀನಿನಲ್ಲಿ ಪಳನಿ ಸ್ವಾಮಿ ರವರಿಗೆ ಸೇರಿದ ಬಿಂದಿಗೆ ಹಗ್ಗ ಬಿದ್ದಿರುವುದನ್ನು ಕಂಡು ನೀವು ಹಸು ಬಿಟ್ಟು ಹುರುಳಿ ಮೇಯಿಸಿದಿದ್ದ ಮೇಲೆ ನಿಮ್ಮ ವಸ್ತುಗಳು ನಮ್ಮ ಜಮೀನಿಗೆ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಸಮರ್ಪಕ ಉತ್ತರ ನೀಡದಿದ್ದಾಗ ನಮ್ಮ ತಾಯಿ ತಂದೆ ರಾಮಪುರ ಪೊಲೀಸ್ ಠಾಣೆಗೆ ಮನವಿ ನೀಡಿ ಪಳನಿ ಸ್ವಾಮಿರವರಿಗೆ ಬುದ್ಧಿ ಹೇಳುವಂತೆ ಕೇಳಿಕೊಂಡಿದ್ದರು. ಈ ಸಂಬಂಧ ಪಳನಿಸ್ವಾಮಿ ಅವರನ್ನು ಪೊಲೀಸ್ ಠಾಣೆಗೆ ಬರುವಂತೆ ಪೊಲೀಸರು ದೂರವಾಣಿ ಕರೆ ಮಾಡಿ ತಿಳಿಸಿದ್ದಾಗ ಬರುವುದಾಗಿ ತಿಳಿಸಿ ಸುಮ್ಮನಿದ್ದರೂ ಆದರೆ ಜನವರಿ 24 ರಂದು ಪಳನಿಸ್ವಾಮಿ ಈ ದಿನ ಹೆಂಡತಿ ಚೆಲುವೆ ಅಣ್ಣ ಅಂಗಮುತ್ತು, ಪಳನಿ ಸ್ವಾಮಿ ರವರ ಅಣ್ಣನ ಮಗಳಾದ ಮಂಜು ಏಕಾಏಕಿ ಬಂದು ಪೊಲೀಸರಿಗೆ ನಮ್ಮ ಬಗ್ಗೆ ಹೇಳುತ್ತೀರಾ ಎಂದು ತೀಟೆ ಜಗಳ ತೆಗೆದು ನಮ್ಮ ತಾಯಿಯ ಮೇಲೆ ಹಲ್ಲೆ ಮಾಡಿ ನಿಂದಿಸಿದ್ದರು. ಈ ವೇಳೆ ಸಮೀಪದ ಜಮೀನಿನ ಮಾಲೀಕರು ನೀವು ಮಾಡುತ್ತಿರುವುದು ಸರಿಯಿಲ್ಲ ಎಂದು ಬುದ್ಧಿವಾದ ಹೇಳಿದಾಗ ಅಂಗಮುತ್ತು ಈ ಮಾದಿಗ ಸೂಳೆಮಕ್ಕಳನ್ನು ಒಡೆದು ಸಾಯಿಸು ಎಂದು ತಿಳಿಸಿದ್ದಲ್ಲದೆ ಮಂಜು ಕಣ್ಣಮ್ಮ ರವರನ್ನು ಕಟ್ಟಿ ಹಾಕಿದ್ದಾರೆ ಎಂದು ದೂರು ನೀಡಿ ಸೆಲ್ವಿ ಅಂಗಮುತ್ತು ಮಂಜುರವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ರಾಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ರಾಮಪುರ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಥಳಕ್ಕೆ ಎಸ್.ಪಿ. ಭೇಟಿ : ರಾಮಪುರ ಪೊಲೀಸ್ ಠಾಣ ವ್ಯಾಪ್ತಿಯ ಕೆ ಆರ್ ನಗರದಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಕಣ್ಣಮ್ಮ ರವರನ್ನು ಮರಕ್ಕೆ ಕಟ್ಟು ಹಾಕಿ ಅಲ್ಲೇ ಮಾಡಿರುವ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಹಾಗೂ ಇನ್ಸ್ಪೆಕ್ಟರ್ ಚಿಕ್ಕರಾಜ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:
error: Content is protected !!