Mysore
26
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಕಾಮಗಾರಿ ಹಂಚಿಕೆಯಲ್ಲಿ ಶಾಸಕರ ತಾರತಮ್ಯ

 ಗುತ್ತಿಗೆದಾರರ ಸಂಘದ ಮುಖಂಡರಿಂದ ಆರೋಪ

ಚಾಮರಾಜನಗರ: ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಧಿಕೃತ ಗುತ್ತಿಗೆದಾರರಿಗೆ ಮೀಸಲಿರುವ ಕಾಮಗಾರಿಗಳನ್ನು ಪರವಾನಗಿ ಪಡೆಯದ ಗುತ್ತಿಗೆದಾರರಿಗೆ ಮಂಜೂರು ಮಾಡಿಸಿ ತಾರತಮ್ಯ ಮಾಡಿದ್ದಾರೆ ಎಂದು ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದ ತಾಲೂಕು ಗೌರವಾಧ್ಯಕ್ಷ ಸಿ.ಕೆ. ಮಂಜುನಾಥ್ ಆರೋಪಿಸಿದರು.

ಪರವಾನಗಿ ಪಡೆದಿರುವ ಎಸ್ಸಿ,ಎಸ್ಟಿ ಗುತ್ತಿಗೆದಾರರಿಗೆ ಶೇ.೨೫ ರಷ್ಟು ಕಾಮಗಾರಿಗಳು ಮೀಸಲಿವೆ. ಆದರೆ, ಶಾಸಕರು ಗುತ್ತಿಗೆ ಪರವಾನಗಿ ಪಡೆದಿಲ್ಲದವರಿಗೆ ಕಾಮಗಾರಿಗಳನ್ನು ನೀಡುತ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಶೇ.೪೦ ಕಮಿಷನ್ ಆರೋಪ ಮಾಡುವ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಶಾಸಕರಿಂದ ನಡೆಯುತ್ತಿರುವ ಅನ್ಯಾಯವನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಎಸ್ಸಿ, ಎಸ್ಟಿಗೆ ಮೀಸಲಿರುವ ಕಾಮಗಾರಿಗಳನ್ನು ಹಿರಿತನದ ಮೇಲೆ ನೀಡಬೇಕು. ತಮಗೆ ಬೇಕಾದವರಿಗೆ “ಕಾಮಗಾರಿಗಳನ್ನು ನೀಡುವಂತೆ ಶಿಫಾರಸ್ಸು ಮಾಡುವ ಶಾಸಕರು ನಮ್ಮ ಪರವಾಗಿ ಯಾವತ್ತು ಹೋರಾಟ ಮಾಡಿಲ್ಲ. ಅಲ್ಲದೇ ವಿಧಾನಸೌಧದಲ್ಲೂ ಧ್ವನಿ ಎತ್ತಿಲ್ಲ. ಇವರಿಗೂ ಗುತ್ತಿಗೆ ಮೀಸಲಾತಿಗೂ ಏನು ಸಂಬAಧ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ನಿಧಿಯಡಿ ರಾಜ್ಯ ಸರ್ಕಾರವು ಪ್ಯಾಕೇಜ್ ಮೂಲಕ ಕಾಮಗಾರಿಗೆ ಆದೇಶಿಸಿದೆ. ಇದರ ವಿರುದ್ಧ ಹೈಕೋರ್ಟ್ನಲ್ಲಿ ಮೊಕದ್ದಮೆ ದಾಖಲಿಸಲಾಗಿದ್ದು ಸಂಬAಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಿದೆ. ಏನೇ ಆದೇಶ ಮಾಡಿದರೂ ಷರತ್ತಿಗೆ ಬದ್ಧರಾಗುವಂತೆ ನೋಟಿಸ್‌ನಲ್ಲಿ ತಿಳಿಸಿದೆ. ಈ ಸಮಸ್ಯೆ ಇತ್ಯರ್ಥವಾಗುವ ತನಕ ಟೆಂಡರ್ ಸಂಬAಧ ಯಾವುದೇ ಪ್ರಕ್ರಿಯೆ ನಡೆಸಬಾರದು. ಈ ಸಂಬAಧ ೯ ಜಿಲ್ಲೆಗಳಲ್ಲಿ ತಡೆಯಾಜ್ಞೆ ನೀಡಲಾಗಿದೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!