Mysore
32
scattered clouds

Social Media

ಶನಿವಾರ, 11 ಏಪ್ರಿಲ 2026
Light
Dark

ಗುಂಡ್ಲುಪೇಟೆ| ಹುಲಿ ದಾಳಿಗೆ ಹಸು ಸಾವು

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು 

ಗುಂಡ್ಲುಪೇಟೆ: ತಾಲ್ಲೂಕಿನ ಮಾದಾಪಟ್ಟಣ ಗ್ರಾಮದಲ್ಲಿ ಹಸುವಿನ ಮೇಲೆ ಹುಲಿ‌ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ನಡೆದಿದೆ.

ಗ್ರಾಮದ ಗುರುಮಲ್ಲಪ್ಪ ಎಂಬುವವರು ಜಮೀನಿನಲ್ಲಿ ಹಸು ಮೇಯಿಸುವ ಸಂದರ್ಭದಲ್ಲಿ ಹುಲಿ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಗುರುಮಲ್ಲಪ್ಪ ಚೀರಿಕೊಂಡ ಪರಿಣಾಮ ತಕ್ಷಣ ಹುಲಿ ಓಡಿಹೋಗಿದೆ. ಆದರೆ ಹಸುವನ್ನು ಕಚ್ಚಿ ಕೊಂದುಹಾಕಿದ್ದು, ಜೀವನೋಪಾಯಕ್ಕೆ ಆಶ್ರಯವಾಗಿದ್ದ ಹಸು ಕಳೆದುಕೊಂಡು ರೈತ ಕಂಗಾಲಾಗಿದ್ದಾರೆ.

ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಬೆಲೆಬಾಳುವ ಹಸು ಕಳೆದುಕೊಂದು ಆರ್ಥಿಕ‌ ಸಂಕಷ್ಟಕ್ಕೆ ಸಿಲುಕಿರುವ ರೈತನಿಗೆ ಅರಣ್ಯ ಇಲಾಖೆ ತುರ್ತಾಗಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಗ್ರಾಮಸ್ಥರು ಹಾಗೂ ರೈತ ಮುಖಂಡರು ಒತ್ತಾಯಿಸಿದ್ದಾರೆ.

Tags:
error: Content is protected !!